HealthLifestyle

ಹಲ್ಲು ನೋವಿಗೆ ಈ ಎಣ್ಣೆ ಒಂದು ಸಾಕು..!; ತಕ್ಷಣ ನೋವು ಮಾಯ ಮಾಡುತ್ತೆ..!

ಹಲ್ಲು ನೋವು ತಡೆಯಲಾರದೆ ಪರಿತಪಿಸುವವರು ಎಷ್ಟೋ ಮಂದಿ ಇದ್ದಾರೆ.. ಹಲ್ಲು ನೋವು ಬಂದಾಗ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ.. ಆದ್ರೆ ಇದು ಆರೋಗ್ಯಕ್ಕೆ ಮತ್ತಷ್ಟು ತೊಂದರೆ ಕೊಡುತ್ತೆ..  ಹಲ್ಲು ನೋವು ಶುರುವಾದರೆ ಅದರ ಜೊತೆಗೆ ತಲೆನೋವು ಕೂಡ ಬರುತ್ತದೆ. ಅದನ್ನು ಅನುಭವಿಸಿದವರಿಗೇ ಗೊತ್ತು. ಹಲ್ಲುನೋವು ಶುರುವಾದರೆ, ಮಾಡಬೇಕಾದ ಕೆಲಸದ ಮೇಲೆ ಏಕಾಗ್ರತೆಯೂ ಇರೋದಿಲ್ಲ.. ಆದ್ರೆ ಈ ಹಲ್ಲು ನೋವನ್ನು ಮನೆಮದ್ದುಗಳಿಂದ ಸುಲಭವಾಗಿ ಗುಣಪಡಿಸಬಹುದು. ಅಡುಗೆ ಮನೆಯಲ್ಲೇ ಇರುವ ವಸ್ತುಗಳನ್ನು ಬಳಸಿ ಮದ್ದು ತಯಾರಿಸಬಹುದು..

ನಮ್ಮ ಅಡುಗೆಮನೆಯ ಪದಾರ್ಥಗಳೇ ನಮ್ಮ ಎಲ್ಲಾ ರೋಗಗಳನ್ನು ಗುಣಪಡಿಸುತ್ತೆ ಅನ್ನೋ ಮಾತಿದೆ. ಅದೇ ರೀತಿ ನಾವು ಅಡುಗೆಯಲ್ಲಿ ಬಳಸುವ ಸಾಂಬಾರ ಪದಾರ್ಥಗಳಲ್ಲಿ ಲವಂಗದಿಂದ ಹಲ್ಲು ನೋವನ್ನು ನಿವಾರಿಸಬಹುದು. ಹಲ್ಲುನೋವು ಸಮಸ್ಯೆಗೆ ಲವಂಗದ ಎಣ್ಣೆ ತುಂಬಾ ಒಳ್ಳೆಯದು. ಲವಂಗದ ಎಣ್ಣೆಯಿಂದ ಹಲ್ಲುನೋವು ನಿವಾರಣೆಯಾಗುತ್ತದೆ. ಏಕೆಂದರೆ ಲವಂಗದ ಎಣ್ಣೆಯು ಯುಜೆನಾಲ್ ಎಂಬ ಸಂಯುಕ್ತವನ್ನು ಹೊಂದಿರುತ್ತದೆ. ಇದು ಹಲ್ಲುನೋವು, ಸೋಂಕುಗಳು, ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ. ಇದಲ್ಲದೆ, ಲವಂಗ ಎಣ್ಣೆಯು ಬ್ಯಾಕ್ಟೀರಿಯಾ ವಿರೋಧಿ, ಆಂಟಿಫಂಗಲ್ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಹಲ್ಲುನೋವು ಕಡಿಮೆ ಮಾಡಲು ಇದು ಉಪಯುಕ್ತವಾಗಿದೆ.

ಇದಕ್ಕಾಗಿ ಸಾಕಷ್ಟು ಲವಂಗವನ್ನು ತೆಗೆದುಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ, ಗಾಜಿನ ಪಾತ್ರೆಯಲ್ಲಿ ಹಾಕಿ, ಲವಂಗವನ್ನು ಮುಚ್ಚುವಷ್ಟು ಆಲಿವ್ ಎಣ್ಣೆಯನ್ನು ಸುರಿಯಿರಿ ಮತ್ತು ಅದನ್ನು ಮುಚ್ಚಿ. ನಂತರ ಒಂದು ವಾರ ಅಥವಾ ಎರಡು ವಾರಗಳ ಕಾಲ ನೇರ ಸೂರ್ಯನ ಬೆಳಕಿನಲ್ಲಿ ಇರಿಸಿ, ಅದನ್ನು ಫಿಲ್ಟರ್ ಮಾಡಿ ಮತ್ತು ಲವಂಗ ಎಣ್ಣೆಯನ್ನು ಮತ್ತೊಂದು ಗಾಜಿನ ಪಾತ್ರೆಯಲ್ಲಿ ಸುರಿಯಿರಿ ಮತ್ತು ಅದನ್ನು ಬಳಸಿ.. ನೋವು ಎಲ್ಲಿದೆಯೋಮ ಅಲ್ಲಿ ಎಣ್ಣೆಯನ್ನು ಹಚ್ಚುವುದರಿಂದ ತಕ್ಷಣ ಹಲ್ಲು ನೋವಿಗೆ ಪರಿಹಾರ ಕಂಡುಕೊಳ್ಳಬಹುದು..

ಲವಂಗದ ಎಣ್ಣೆಯಲ್ಲಿ ಹತ್ತಿಯನ್ನು ಅದ್ದಿ ಅದನ್ನು ಉಂಡೆ ಮಾಡಿ ನೋಯುತ್ತಿರುವ ಹಲ್ಲಿನ ಮೇಲೆ ಇಡಬೇಕು.. ಇದರಿಂದ ತಕ್ಷಣಕ್ಕೆ ಹಲ್ಲಿನ ನೋವು ನಿವಾರಣೆಯಾಗುತ್ತದೆ.. ಇದು ಶಾಶ್ವತ ಪರಿಹಾರ ಅಂತೂ ಅಲ್ಲ..

 

Share Post