Health

ಮಳೆ ಬರ್ತಿದೆ, ಸೊಳ್ಳೆಗಳು ಹೆಚ್ಚಾಗ್ತಿವೆ; ಯಾಮಾರಿದ್ರೆ ಮಲೇರಿಯಾ ವಕ್ಕರಿಸಬಹುದು ಹುಷಾರ್‌!!

ಮಳೆಗಾಲ ಬಂತು ಅಂದ್ರೆ ಸೊಳ್ಳೆಗಳು ಹೆಚ್ಚಾಗುತ್ತವೆ.. ಸೊಳ್ಳೆಗಳು ಹೆಚ್ಚಾದವು ಅಂದ್ರೆ ಮನುಷ್ಯರಿಗೆ ಕಾಯಿಲೆಗಳೂ ಹೆಚ್ಚಾಗುತ್ತವೆ.. ಅದ್ರಲ್ಲೂ ಕೂಡಾ ವೈರಲ್‌ ಫೀವರ್‌ ಹಾಗೂ ಮಲೇರಿಯಾದಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತದೆ.. ವಿಶ್ವದ ಮಾರಣಾಂತಿಕ ಸಾಂಕ್ರಾಮಿಕ ರೋಗಗಳಲ್ಲಿ ಮಲೇರಿಯಾ ಕೂಡಾ ಒಂದು.. ಮಲೇರಿಯಾ ಸೋಂಕಿತ ಮಹಿಳೆಗೆ ಹುಟ್ಟುವ ಮಗುವಿಗೂ ಹರಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.. ಅಷ್ಟು ಡೇಂಜರ್‌ ಇದು.. ಅನಾಪಿಲಿಸ್‌ ಎಂಬ ಹೆಣ್ಣುಸೊಳ್ಳೆಯಿಂದ ಇದು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.. ಹೀಗಾಗಿ ಈಗ ಮಳೆಗಾಲ ಶುರುವಾಗಿರುವುದರಿಂದ ಸಾಕಷ್ಟು ಎಚ್ಚರಿಕೆಯಿಂದ ಇರುವುದು ಒಳ್ಳೆಯದು.. ಆದಷ್ಟು ಸೊಳ್ಳೆಗಳಿಂದ ದೂರ ಇದ್ದರೆ ಆರೋಗ್ಯ ಚೆನ್ನಾಗಿರುತ್ತದೆ.. ಮಲೇರಿಯಾ ಬರದಂತೆ ತಡೆಯೋದು ಹೇಗೆ ಅನ್ನೋದನ್ನು ನೋಡೋಣ..

ಅರಿಶಿನ;

ಮನೆಮದ್ದುಗಳಲ್ಲಿ ಅರಿಶಿನ ಹೆಚ್ಚು ಶಕ್ತಿಯುತವಾದ್ದು.. ಇದು ಎಷ್ಟೋ ರೋಗಗಳಿಗೆ ಮದ್ದು.. ಇದನ್ನು ಸೇವಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.. ಪ್ಲಾಸ್ಮೋಡಿಯಂ ಸೋಂಕಿನಿಂದ ದೇಹದಲ್ಲಿ ಸಂಗ್ರಹವಾದ ವಿಷವನ್ನು ತೆಗೆದುಹಾಕಲು ಅರಿಶಿನ ಸಾಕಷ್ಟು ಸಹಾಯ ಮಾಡುತ್ತದೆ. ಅರಿಶಿನ ಸೇವನೆ ಮಾಡಿದರೆ ಅದು ಮಲೇರಿಯಾ ಪರಾವಲಂಬಿಯನ್ನು ಕೊಲ್ಲುತ್ತದೆ.

ದಾಲ್ಚಿನ್ನಿ;

ದಾಲ್ಚಿನ್ನಿ ಉರಿಯೂತ ನಿವಾರಕ, ಉತ್ಕರ್ಷಣ ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ.. ಹೀಗಾಗಿ ಇದನ್ನು ಆಹಾರದ ಮೂಲಕ ಸೇವಿಸುವುದರಿಂದ ಮಲೇರಿಯಾ ಬರದಂತೆ ತಡೆಯಬಹುದು.. ಕುದಿಯುವ ನೀರಿಗೆ ದಾಲ್ಚಿನ್ನಿ ಮತ್ತು ಕರಿಮೆಣಸಿನ ಪುಡಿ ಸೇರಿಸಿ ಕುಡಿಯವುದು ಒಳ್ಳೆಯದು. ಮಲೇರಿಯಾ ರೋಗ ಲಕ್ಷಣಗಳು ಕಂಡುಬಂದಾಗ ಈ ಕಷಾಯ ಕುಡಿದರೆ ಬಹುಬೇಗ ಗುಣಮುಖವಾಗುವ ಸಾಧ್ಯತೆ ಇರುತ್ತದೆ.. ಈ ಕಷಾಯ ಕುಡಿಯಲು ಕಷ್ಟವಾಗಿದ್ದರೆ ಜೇನುತುಪ್ಪವನ್ನು ರುಚಿಗೆ ತಕ್ಕಷ್ಟು ಬಳಸಬಹುದು. ದಿನಕ್ಕೆ ಒಂದು ಅಥವಾ ಎರಡು ಬಾರಿ ಕುಡಿದರೆ ಸಾಕು. ಇದರ ಜೊತೆಗೆ ಎಳನೀರುವುದು ಕುಡಿಯುವುದು ಕೂಡಾ ಒಳ್ಳೆಯದು..

ಕಿತ್ತಳೆ ರಸ;

ಮಲೇರಿಯಾ ಲಕ್ಷಣಗಳಿದ್ದರೆ ಕಿತ್ತಳೆ ಜ್ಯೂಸ್‌ ಸೇವಿಸುವುದು ಒಳ್ಳೆಯದು.. ಯಾಕಂದ್ರೆ ಇದರಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಇದರಿಂದ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜ್ವರವನ್ನು ಕಡಿಮೆ ಮಾಡುವಲ್ಲಿ ಕಿತ್ತಳೆ ಜ್ಯೂಸ್‌ ಒಳ್ಳೆಯ ಕೆಲಸ ಮಾಡುತ್ತದೆ..  ದಿನಕ್ಕೆ 2 ರಿಂದ 3 ಗ್ಲಾಸ್ ತಾಜಾ ಕಿತ್ತಳೆ ರಸ ಸೇವಿಸಿದರೆ ದೇಹದಲ್ಲಿ ಚೈತನ್ಯ ಉಂಟಾಗಿ ರೋಗ ವಾಸಿಯಾಗಲು ಅನುಕೂಲವಾಗುತ್ತದೆ..

ತುಳಸಿ;

ಆಯುರ್ವೇದ ಔಷಧದಲ್ಲಿ, ತುಳಸಿಯನ್ನು ಹೆಚ್ಚಾಗಿ ಮಲೇರಿಯಾದ ಲಕ್ಷಣಗಳು ಮತ್ತು ತೀವ್ರತೆಯನ್ನು ಕಡಿಮೆ ಮಾಡಲು ಬಳಸಲಾಗುತ್ತದೆ. ತುಳಸಿಯನ್ನು ಕಾಳುಮೆಣಸಿನ ಪುಡಿಯೊಂದಿಗೆ ಬೆರೆಸಿ ಸೇವಿಸಿದರೆ ಆರೋಗ್ಯ ಸುಧಾರಿಸುತ್ತದೆ.

 

 

Share Post