ಎಗ್ಬುರ್ಜಿ, ಪಾನಿಪೂರಿ ತಿಂದ 20 ವಿದ್ಯಾರ್ಥಿನಿರು ಅಸ್ವಸ್ಥ!
ರಾಯಚೂರು; ಎಗ್ ಬುರ್ಜಿ ಹಾಗೂ ಪಾನಿ ಪೂರಿ ತಿಂದಿದ್ದ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತೀವ್ರ ಅಸ್ವಸ್ಥರಾಗಿರುವ ಘಟನೆ ನಡೆದಿದೆ.. ರಾಯಚೂರು ಕೃಷಿ ವಿವಿಯ ಉದಯ ವಸತಿ ನಿಲಯದ ವಿದ್ಯಾರ್ಥಿನಿಯರಿಗರ ವಾಂತಿ, ಬೇಧಿ ಕಾಣಿಸಿಕೊಂಡಿದೆ.. ಹೀಗಾಗಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ..
ಅಸ್ವಸ್ಥ ವಿದ್ಯಾರ್ಥಿನಿಯರು ಸ್ನಾತಕೋತ್ತರ ಪದವಿ ಹಾಗೂ ಪಿಎಚ್ಡಿ ಅಧ್ಯಯನ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.. ಎಲ್ಲರೂ ವಿವಿಯ ಉದಯ ವಸತಿ ನಿಲಯದಲ್ಲಿದ್ದರು.. ಇವರು ಪಾನಿಪುರಿ ಹಾಗೂ ಎಗ್ ಬುರ್ಜಿ ಸೇವಿಸಿ ಆಸ್ಪತ್ರೆ ಸೇರಿದ್ದಾರೆ.. ಎಗ್ ಬುರ್ಜಿ ತಿಂದ ಮೇಲೆ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ನಂತರ ವಾಂತಿ ಬೇಧಿಯಾಗಿದೆ.. ಸದ್ಯ ವಿದ್ಯಾರ್ಥಿನಿಯರ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ..