ಬಂಡಾಯ ಸ್ಪರ್ಧೆ ಹಿನ್ನೆಲೆ; ಈಶ್ವರಪ್ಪ ಬಿಜೆಪಿಯಿಂದ ಉಚ್ಛಾಟನೆ
ಬೆಂಗಳೂರು; ಶಿವಮೊಗ್ಗದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಕೆ.ಎಸ್.ಈಶ್ವರಪ್ಪ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.. ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಈ ಆದೇಶ ಹೊರಡಿಸಿದ್ದಾರೆ.
ಈಶ್ವರಪ್ಪ ಅವರು ತಮ್ಮ ಪುತ್ರ ಕಾಂತೇಶ್ಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಕೇಳಿದ್ದರು.. ಆದ್ರೆ ಹೈಕಮಾಂಡ್ ನೀಡಿರಲಿಲ್ಲ.. ಇದಕ್ಕೆ, ಯಡಿಯೂರಪ್ಪ ಕುಟುಂಬವೇ ಕಾರಣ ಎಂದು ಈಶ್ವರಪ್ಪ ಆರೋಪ ಮಾಡಿದ್ದರು.. ಈಶ್ವರಪ್ಪ ಮಗನ ವಿರುದ್ಧವೇ ಈಶ್ವರಪ್ಪ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು.. ಇಷ್ಟು ದಿನ ಈಶ್ವರಪ್ಪ ಅವರ ಮನವೊಲಿಸುವ ಕಸರತ್ತು ನಡೆದಿತ್ತು.. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ.. ಹೀಗಾಘಿ ಈಶ್ವರಪ್ಪ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ..
ಬಂಡಾಯ ಎದ್ದಿರುವ ಈಶ್ವರಪ್ಪ ಮನವೊಲಿಕೆಗೆ ಕೇಂದ್ರ ನಾಯಕರ ತಂಡ, ರಾಜ್ಯ ನಾಯಕರು, ಸ್ಥಳೀಯರ ಮುಖಂಡರು ಯತ್ನಿಸಿದ್ದರೂ ಯಾವುದೇ ಪ್ರಯೋಜವಾಗಿರಲಿಲ್ಲ. ಇತ್ತೀಚೆಗೆ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ಮನೆಗೆ ಬಂದಾಗ, ವಿಜಯೇಂದ್ರ ಮತ್ತು ಬಿಎಸ್ ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ತಮ್ಮ ಅಸಮಾಧಾನ ಹೊರಹಾಕಿದ್ದರು.