BengaluruCrime

ಇದೆಂಥಾ ಸವಾರಿ..?; ಆಕೆಗಾದರೂ ಬುದ್ಧಿ ಬೇಡವೇ..?

ಬೆಂಗಳೂರು; ಬೆಂಗಳೂರು ಟ್ರಾಫಿಕ್‌ ನಲ್ಲಿ ಯಾವಾಗ ಏನು ಅನಾಹುತ ನಡೆಯುತ್ತೋ ಗೊತ್ತಾಗೋದಿಲ್ಲ.. ನಾವು ಎಷ್ಟೇ ಎಚ್ಚರಿಕೆಯಿಂದ ವಾಹನಗಳನ್ನು ಓಡಿಸಿದರೂ ಒಮ್ಮೊಮ್ಮೆ ಅನಾಹುತಗಳು ಸಂಭವಿಸಿಬಿಡುತ್ತವೆ.. ಅಂತಹದ್ದರಲ್ಲಿ ನಾವೇ ಅಜಾಗಗರೂಕತೆ ಪ್ರದರ್ಶಿಸಿದರೆ ನಮಗೇ ನಷ್ಟ.. ಇದು ಗೊತ್ತಿದ್ದರೂ ದಂಪತಿಯೊಬ್ಬರು ಬೇಜವಾಬ್ದಾರಿಯಾಗಿ ವರ್ತನೆ ಮಾಡಿದ್ದಾರೆ.. ದಂಪತಿಯೊಬ್ಬರು ಬೈಕ್‌ನಲ್ಲಿ ಹೋಗುವಾಗ ತಮ್ಮ ಮಗನನ್ನು ಫೂಟ್‌ ರೆಸ್ಟ್‌ ಮೇಲೆ ನಿಲ್ಲಿಸಿಕೊಂಡು ಪ್ರಯಾಣ ಮಾಡಿದ್ದಾರೆ.. ಇದನ್ನ ನೋಡಿದವರು ವಿಡಿಯೋ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹಾಕಿದ್ದು, ಸಾರ್ವಜನಿಕರು ದಂಪತಿ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

ಇದನ್ನೂ ಓದಿ; ಇದು ಪುಷ್ಪ-2 ಅಲ್ಲ, ಬಾಜ್ಪ-2; ಮೋದಿ ಪೋಸ್ಟರ್‌ ಫುಲ್‌ ವೈರಲ್‌

ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಈ ದೃಶ್ಯ ಕಂಡುಬಂದಿದೆ ಎಂದು ಹೇಳಲಾಗುತ್ತಿದೆ.. @Lollubee ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ.. ಪೊಲೀಸರಿಗೆ ಇದನ್ನು ಟ್ಯಾಗ್‌ ಮಾಡಲಾಗಿದ್ದು, ದಂಪತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ವೈರಲ್ ವಿಡಿಯೋದಲ್ಲಿ ತಮ್ಮ ಮಗನನ್ನು ದ್ವಿಚಕ್ರ ವಾಹನದ ಫೂಟ್ ರೆಸ್ಟ್ ಮೇಲೆ ನಿಲ್ಲಿಸಿಕೊಂಡು ದಂಪತಿಗಳಿಬ್ಬರು ರಾತ್ರಿ ಹೊತ್ತಿನಲ್ಲಿ ವೈಟ್ ಫೀಲ್ಡ್ ರಸ್ತೆಯಲ್ಲಿ ಸ್ಕೂಟರ್ ಸವಾರಿ ಹೊರಟಿರುವ ಆಘಾತಕಾರಿ ದೃಶ್ಯವನ್ನು ಕಾಣಬಹುದು.

ಏಪ್ರಿಲ್ 15 ರಂದು ಈ ವಿಡಿಯೋ ಶೇರ್‌ ಮಾಡಲಾಗಿದ್ದು, ಎಲ್ಲೆಡೆ ವೈರಲ್‌ ಆಗುತ್ತಿದೆ..

ಇದನ್ನೂ ಓದಿ; ಪಾಕಿಸ್ತಾನದಲ್ಲಿ ರಣಭೀಕರ ಮಳೆ; 63 ಮಂದಿ ಸಾವು, 100 ಜನ ನಾಪತ್ತೆ!

Share Post