ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ
ಮೈಸೂರು; ಮೈಸೂರಿನಲ್ಲಿ ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ, ದೇಶದ ಐಟಿ ಹಬ್ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪ್ರಸ್ತಾಪ ಮಾಡಿದರು. ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು
ಇವತ್ತು ನಾವು ನಮ್ಮ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದೇವೆ. ಇವತ್ತಿನ ಸಂಕಲ್ಪ ಪತ್ರ ಮೋದಿಯ ಗ್ಯಾರಂಟಿಯಾಗಿದೆ. ಪ್ರತಿ ಬಡವನಿಗು ಮನೆ ನೀಡುವ ಯೋಜನೆ ಮಾಡಿದ್ದೇವೆ. 3 ಕೋಟಿ ಮಹಿಳೆಯರನ್ನು ನಾವು ಲಕ್ಷಾದೀಶೆಯನ್ನಾಗಿ ಮಾಡುತ್ತೇವೆ. ಡಿಜಿಟಲ್ ಇಂಡಿಯಾ ನಮ್ಮ ಜನರ ಬದುಕನ್ನು ಬದಲಾಯಿಸಿದೆ. ಇದು ಹೊಸ ಭಾರತ ಹೊಸ ಚಿತ್ರರಣವಾಗಿದೆ ಎಂದರು.
ಹಿಂದಿನ ಭಾರತ ಹಳೆಯ ಹಳ್ಳ ಬಿದ್ದ ರಸ್ತೆಗಳಿದ್ದವು. ಆದರೆ ಇಂದಿನ ಭಾರತ ಬದಲಾಗಿದೆ. ಪೂರ್ಣ ಪ್ರಮಾಣದಲ್ಲಿ ಹೈವೆ ರಸ್ತೆಗಳು ನಿರ್ಮಾಣವಾಗಿವೆ. ಭಾರತ ಪ್ರಪಂಚದ RND ಹಬ್ಬ ಮುಂದಿನ ದಿನದಲ್ಲಿ ನಿರ್ಮಾಣ ಆಗಲಿದೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಸಾಕಷ್ಟು ಬದಲಾವಣೆ ಮಾಡುತ್ತೇವೆ. 10 ವರ್ಷಗಳ ಹಿಂದೆ ಭಾರತ ಬೇರೆ ದೇಶದ ಮೇಲೆ ಅವಲಂಬಿತವಾಗಿತ್ತು. ಟೆಕ್ನಾಲಜಿ ಕ್ಷೇತ್ರದಲ್ಲಿ ಇಂದು ಸಾಕಷ್ಟು ಬದಲಾವಣೆ ಮಾಡಿದ್ದೇವೆ. ವೈಜ್ಞಾನಿಕ ಸಂಶೋಧನೆಗಳು ನಡೆಯುತ್ತೇವೆ. ಕನ್ನಡ ದೇಶದ ಸಮೃದ್ಧಿ ಭಾಷೆವಾಗಿದೆ. ಎನ್ಡಿಎ ಏನು ಹೇಳುತ್ತೋ ಅದನ್ನು ಮಾಡಿ ತೋರಿಸುತ್ತದೆ. ತ್ರಿವಳಿ ತಲಾಖ್, ಮಹಿಳೆಯರಿಗೆ ಮೀಸಲಾತಿ, ರಾಮಮಂದಿರ ನಿರ್ಮಾಣ. ಬಿಜೆಪಿಯ ಸಂಕಲ್ಪ ಅದು ಮೋದಿಯ ಗ್ಯಾರಂಟಿ ಆಗಿರುತ್ತದೆ. ನಿಮ್ಮ ಒಂದು ವೋಟ್ನಿಂದ ನನ್ನ ಶಕ್ತಿ ಬಲವರ್ಧನೆ ಮಾಡುತ್ತೆ ಎಂದರು.