BengaluruPolitics

ಲೋಕಸಭಾ ಚುನಾವಣೆ; ಮತಗಟ್ಟೆ ಅಧಿಕಾರಿಗಳ ರ‍್ಯಾಂಡಮೈಸೇಷನ್ 

ಲೋಕಸಭಾ ಚುನಾವಣೆ ಸಂಬಂಧಿಸಿದಂತೆ ಮತಗಟ್ಟೆ ಸಿಬ್ಬಂದಿಯ ಎರಡನೇ ಹಂತದ(2nd Level Randomization of Polling Persons) ರ‍್ಯಾಂಡಮೈಸೇಷನ್ ಅನ್ನು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಸಾಮಾನ್ಯ ವೀಕ್ಷಕರುಗಳ ಸಮ್ಮುಖದಲ್ಲಿ ಇಂದು ಮಲ್ಲೇಶ್ವರಂ ಐಪಿಪಿ ಕೇಂದ್ರದಲ್ಲಿ ನಡೆಸಿದರು.

ಇದನ್ನೂ ಓದಿ; NDAಗೆ ಪೂರ್ಣ ಬಹುಮತ ದೊರಕುವುದಿಲ್ಲ; ಸಿಎಂ ಸಿದ್ದರಾಮಯ್ಯ ಶ್ಲಾಘನೆ

ಜಿಲ್ಲಾ ಚುನಾವಣಾಧಿಕಾರಿ-ಬೆಂಗಳೂರು ಇವರ ವ್ಯಾಪ್ತಿಯಲ್ಲಿ ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಸೇರಿದಂತೆ ಮೂರು ಲೋಕಸಭಾ ಕ್ಷೇತ್ರಗಳು ಬರಲಿವೆ. ಈ ಸಂಬಂಧ ಮೂರು ಲೋಕಸಭಾ ಕ್ಷೇತ್ರಗಳಲ್ಲಿ 24 ವಿಧಾನಸಭಾ ಕ್ಷೇತ್ರಗಳು ಬರಲಿದ್ದು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ 1 ವಿಧಾನಸಭಾ ಕ್ಷೇತ್ರ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ 3 ಲೋಕಸಭಾ ಕ್ಷೇತ್ರಗಳು ಬರಲಿವೆ.

ಅದರಂತೆ, 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟಾರೆ 43123 ಮತಗಟ್ಟೆ ಅಧಿಕಾರಿ/ಸಿಬ್ಬಂದಿಗಳನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ; ಕಚೇರಿಯಲ್ಲೇ ವ್ಯವಸಾಯ ಮಾಡುತ್ತಿರುವ ಕಂಪನಿಗಳು; ಇದು ಹೊಸ ಕೃಷಿ ಪದ್ಧತಿ!

ಲೋಕಸಭಾ ಚುನಾವಣೆಗೆ ನಿಯೋಜನೆ ಮಾಡಿಕೊಂಡಿರುವ ಮತಗಟ್ಟೆ ಅಧಿಕಾರಿಗಳಿಗೆ ದಿನಾಂಕ: 17-04-2024ರಂದು ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿಗಧಿಪಡಿಸಿರುವ ಸ್ಥಳಗಳಲ್ಲಿ ಬೆಳಗ್ಗೆ 9.30ರಿಂದ ಎರಡನೇ ಹಂತದ ತರಬೇತಿಯನ್ನು ನಡೆಸಲು ನೀಡಲು ನಿರ್ಧರಿಸಲಾಗಿದೆ. ದಿನಾಂಕ: 24-04-2024 ರಂದು ಅಂತಿಮ ಹಂತದ(Final Level Randomization of Polling Persons) ರ‍್ಯಾಂಡಮೈಸೇಷನ್ ಅನ್ನು ನಡೆಸಲಾಗುತ್ತದೆ.

ಅದಲ್ಲದೆ, ಮತದಾನದ ದಿನ ಕಾರ್ಯನಿರ್ವಹಿಸಲು ಮೈಕ್ರೋ ಅಬ್ಸವರ್ಸ್ ನೇಮಿಸುವ ಹಾಗೂ ಅವರಿಗೆ ತರಬೇತಿ ನೀಡುವ ಕುರಿತು ಸಾಮಾನ್ಯ ವೀಕ್ಷಕರೊಂದಿಗೆ ಇದೇ ವೇಳೆ ಚರ್ಚಿಸಲಾಯಿತು.

ಇದನ್ನೂ ಓದಿ; ಪ್ರಾಪರ್ಟಿ ಕೊಳ್ಳುವ ಮೊದಲ ಈ ದಾಖಲೆಗಳನ್ನು ಪರಿಶೀಲಿಸಲೇಬೇಕು..!

ಈ ವೇಳೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಾಮನ್ಯ ವೀಕ್ಷಕರಾದ ಶ್ರೀ ಮಕ್ರಂದ್ ಪಾಂಡುರಂಗ್, ಬೆಂಗಳೂರು ಉತ್ತದ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಶ್ರೀಮತಿ ಗಾಯತ್ರಿ ರಾಥೋರ್, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಶ್ರೀಮತಿ ವಾಣಿ ಮೋಹನ್ ಹಾಗೂ ಎಂಸಿಸಿ ನೊಡಲ್ ಅಧಿಕಾರಿಯಾದ ಶ್ರೀ ಮುನೀಶ್ ಮೌದ್ಗಿಲ್, ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಶ್ರೀ ಸೆಲ್ವಮಣಿ, ಚುನಾವಣಾಧಿಕಾರಿಗಳಾದ ಡಾ. ಹರೀಶ್ ಕುಮಾರ್, ಕೆ.ಎ ದಯಾನಂದ್, ವಿನೋತ್ ಪ್ರಿಯಾ, ಸಹಾಯಕ ಆಯುಕ್ತರಾದ ರವಿ ಚಂದ್ರ ನಾಯ್ಕ್, ಜಿಲ್ಲಾ ಮಟ್ಟದ ಮಾನವ ಸಂಪನ್ಮೂಲ ನೋಡಲ್ ಅಧಿಕಾರಿಯಾದ ಡಿ.ಆರ್ ಅಶೋಕ್, ಎನ್.ಐ.ಸಿ ಸಿಬ್ಬಂದಿ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ; ದೇಶ ಸೇವೆ ಮಾಡಿದ ಯೋಧನ ಮಗ ಉಗ್ರನಾಗಿದ್ದು ಹೇಗೆ..?

Share Post