ಅಪ್ಪು ಜೊತೆ ಇರುವ ಫೋಟೋ ಹಂಚಿಕೊಂಡ ಅರ್ಜುನ್ ಸರ್ಜಾ
ಬೆಂಗಳೂರು: ನಟ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರು ಪುನೀತ್ ರಾಜ್ ಕುಮಾರ್ ಜೊತೆ ತೆಗೆಸಿಕೊಂಡಿದ್ದ ಬಾಲ್ಯದ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅಪ್ಪು ಅವರನ್ನು ನೆನಪಿಸಿಕೊಂಡಿದ್ದಾರೆ.
ಅಪ್ಪು ಅವರು ಅಗಲಿದಾಗ ಅರ್ಜುನ್ ಸರ್ಜಾ ದುಬೈ ಅಲ್ಲಿದ್ದರು. ವಿಷಯ ತಿಳಿದ ಕೂಡಲೇ ಹೊರಟು ಬಂದು ಅಪ್ಪು ಅವರ ಅಂತಿಮ ದರ್ಶನ ಪಡೆದಿದ್ದರು. ಅಪ್ಪು ಮೇಲೆ ಅವರಿಗಿದ್ದ ಪ್ರೀತಿ ಎಂಥದ್ದು ಎಂದು ಇದರಿಂದ ಗೊತ್ತಾಗುತ್ತೆ.