Residencial Schools; ʻಜ್ಞಾನ ದೇಗುಲʼದ ವಿವಾದ; ಸರ್ಕಾರವನ್ನು ʻಪ್ರಶ್ನಿಸುʼತ್ತಿವೆ ವಿಪಕ್ಷಗಳು!
ಬೆಂಗಳೂರು; ರಾಜ್ಯದಲ್ಲಿ ಯಾವುದೇ ಸರ್ಕಾರಿ ಶಾಲೆ, ಸರ್ಕಾರಿ ವಸತಿ ಶಾಲೆ ಬಳಿ ಹೋದರೆ ಮೊದಲು ಕಾಣೋದೇ ʼಜ್ಞಾನ ದೇಗುಲವಿದು, ಕೈಮುಗಿದು ಒಳಗೆ ಬನ್ನಿʼ ಎಂಬ ಸಾಲು.. ಇದನ್ನು ಬರೆದವರು ಕುವೆಂಪುರವರು.. ದಶಕಗಳಿಂದ ಈ ಸಾಲನ್ನು ಶಾಲೆಗಳ ಮುಂದೆ ಬರೆಸಲಾಗುತ್ತಿದೆ.. ಆದ್ರೆ ಇದೀಗ ಸರ್ಕಾರಿ ವಸತಿ ಶಾಲೆಗಳಲ್ಲಿ ಈ ಸಾಲನ್ನು ಇದ್ದಕ್ಕಿದ್ದಂತೆ ತಿರುಚಲಾಗಿದೆ. ʻಜ್ಞಾನ ದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿ..ʼ ಎಂದು ಬರೆಸಲಾಗಿದೆ. ಇದೀಗ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ… ಸರ್ಕಾರದ ಈ ಕ್ರಮವನ್ನು ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಖಂಡಿಸುತ್ತಿವೆ.
ಇದನ್ನೂ ಓದಿ; Dragon Fruit; ಡ್ರ್ಯಾಗನ್ ಫ್ರೂಟ್ ಫೇಸ್ ಪ್ಯಾಕ್ ಯಾವಾಗ್ಲಾದರೂ ಬಳಸಿದ್ದೀರಾ..?
ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ವಿವಾದ;
ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ವಿವಾದ; ಒಂದು ಸಣ್ಣ ವಿಚಾರ ಸಿಕ್ಕರೂ ವಿಪಕ್ಷಗಳು ಅದನ್ನು ದೊಡ್ಡ ವಿವಾದ ಮಾಡುತ್ತವೆ. ಕೆರೆಗೋಡು ಹೋರಾಟ ಇದಕ್ಕೆ ಉದಾಹರಣೆ… ಇದಲ್ಲದೆ, ಎಸ್ಎಸ್ಎಲ್ಸಿ ಪರೀಕ್ಷೆ ಟೈಮ್ ಟೇಬಲ್ ವಿಚಾರದಲ್ಲೂ ವಿವಾದ ಎಬ್ಬಿಸಲಾಗಿತ್ತು.. ಹೀಗಿರುವಾಗಲೇ ಸರ್ಕಾರ, ಚುನಾವಣೆ ಹೊಸ್ತಿಲಲ್ಲೇ ಪ್ರತಿಪಕ್ಷಗಳಿಗೆ ಆಹಾರವಾಗಿದೆ. ಕುವೆಂಪು ಅವರ ಸಾಲನ್ನು ತಿರುಚಿರುವುದು ವಿಪಕ್ಷಗಳಿಗೆ ಅಸ್ತ್ರವಾಗಿದೆ.. ಮೊದಲೇ ಬಿಜೆಪಿ ಪಕ್ಷ ಕರ್ನಾಟಕದಲ್ಲಿ ಲಿಂಗಾಯತರ ನಂತರ ಅತಿದೊಡ್ಡ ಸಮುದಾಯವಾಗಿದ್ದು, ಆ ಮತಗಳ ಮೇಲೆ ಕಣ್ಣಿಟ್ಟಿದೆ.. ಹೀಗಾಗಿ ಕುವೆಂಪು ಸಾಲು ಬದಲಿಸಿರುವ ವಿಚಾರವನ್ನು ಬಿಜೆಪಿ ಚುನಾವಣೆಯಲ್ಲಿ ಅಸ್ತ್ರವಾಗಿ ಬಳಸಿಕೊಂಡು ಒಕ್ಕಲಿಗ ಮತಗಳನ್ನು ಸೆಳೆಯುವ ಪ್ರಯತ್ನ ಮಾಡುವುದು ಬಹುತೇಕ ಪಕ್ಕಾ.
ವಸತಿ ಶಾಲೆಗಳ ಪ್ರವೇಶ ದ್ವಾರದ ಸಾಲು ಬದಲು!;
ವಸತಿ ಶಾಲೆಗಳ ಪ್ರವೇಶ ದ್ವಾರದ ಸಾಲು ಬದಲು!; ರಾಜ್ಯದ ಸಮಾಜಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಬರೆಸಲಾಗಿದ್ದ ಜ್ಞಾನ ದೇಗುಲವಿದು ಕೈಗಿದು ಒಳಗೆ ಬಾ ಎಂಬ ಸಾಲನ್ನು ʻಜ್ಞಾನ ದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿ..ʼ ಎಂದು ಬದಲಿಸಿ ಬರೆಸಲಾಗಿದೆ. ವಿಜಯಪುರ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಹೊಸ ಬರಹ ಕಾಣಿಸುತ್ತಿದೆ. ಇದರ ವಿರುದ್ಧ ವಿಪಕ್ಷಗಳು ಧ್ವನಿ ಎತ್ತಿವೆ. ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಬಿಜೆಪಿ ನಾಯಕರು ಆರೋಪ ಮಾಡುತ್ತಿದ್ದಾರೆ.
ಇದನ್ನೂ ಓದಿ; Cold water Therapy; ಮುಖಕ್ಕೆ ಕೋಲ್ಡ್ ವಾಟರ್ ಥೆರಪಿ; ಏನು ಪ್ರಯೋಜನ..?
ರಾಜ್ಯ ಸರ್ಕಾರದ ಸುತ್ತೋಲೆಯಲ್ಲೇನಿದೆ..?;
ರಾಜ್ಯ ಸರ್ಕಾರದ ಸುತ್ತೋಲೆಯಲ್ಲೇನಿದೆ..?; ರಾಜ್ಯ ಸರ್ಕಾರದ ಸುತ್ತೋಲೆ ಹಿನ್ನೆಲೆಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ‘ಜ್ಞಾನ ದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿ’ ಎಂದು ಬರೆಯಲಾಗಿದೆ. ವಸತಿ ಶಾಲಾ ವಿದ್ಯಾರ್ಥಿಗಳ ಪೋಷಕರು ಧೈರ್ಯವಾಗಿ ಪ್ರಶ್ನೆ ಮಾಡಲಿ. ಮಕ್ಕಳ ಶಿಕ್ಷಣ, ವಸತಿ, ಊಟ ಸೇರಿದಂತೆ ವಸತಿ ಶಾಲೆಯ ಎಲ್ಲಾ ವಿಚಾರಗಳ ಕುರಿತು ಪ್ರಶ್ನೆ ಮಾಡಲಿ ಎಂದು ಉದ್ದೇಶದಿಂದ ಈ ಬರಹ ಬರೆಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಈ ಹಿಂದೆ ಪಠ್ಯ ಪುಸ್ತಕದಲ್ಲಿ ಕುವೆಂಪು ವಿಚಾರವಾಗಿ ಒಂದಷ್ಟು ಸಾಲುಗಳನ್ನು ಬದಲಾಯಿಸಿದಾಗಿ ಇದೇ ಕಾಂಗ್ರೆಸ್ ಆಗಿನ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿತ್ತು. ಈಗ ಕಾಂಗ್ರೆಸ್ ಸರ್ಕಾರವೇ ಕುವೆಂಪು ಅವರ ಸಾಲುಗಳನ್ನು ಬದಲಾಯಿಸಿದೆ. ಅದೂ ಕೂಡಾ ಚುನಾವಣೆ ಸಮಯದಲ್ಲಿ ಹೀಗೆ ಮಾಡಿರುವುದು, ವಿಪಕ್ಷಗಳಿಗೆ ಅಸ್ತ್ರವಾಗಿ ಸಿಕ್ಕಂತಾಗಿದೆ.