BengaluruPolitics

ರಾಜ್ಯಕ್ಕೆ ಅನ್ಯಾಯ ಆಗಿದ್ದರೆ ಖರ್ಗೆ ಸದನದಲ್ಲಿ ಯಾಕೆ ಮಾತಾಡಲಿಲ್ಲ; ಆರ್‌.ಅಶೋಕ್‌ ಪ್ರಶ್ನೆ

ಬೆಂಗಳೂರು; ಕೇಂದ್ರ ಸರ್ಕಾರದಿಂದ ರಾಜ್ಯ ಅನ್ಯಾಯವಾಗಿದ್ದರೆ ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆಯವರೇ ಇದ್ದಾರೆ. ಅವರು ಯಾಕೆ ಇದುವರೆಗೂ ಈ ಬಗ್ಗೆ ಒಂದು ಮಾತು ಆಡಿಲ್ಲ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಪ್ರಶ್ನೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಂಸದ ಡಿ.ಕೆ.ಸುರೇಶ್‌ ಸೇರಿ ಕಾಂಗ್ರೆಸ್‌ ನಾಯಕರು ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ನೀಡದೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆ ಅವರೇ ಇದ್ದಾರೆ. ರಾಜ್ಯಕ್ಕೆ ಮೋಸ ಆಗಿದ್ದರೆ ಅವರು ಮಾತನಾಡುತ್ತಿದ್ದರು. ಆದ್ರೆ ಯಾಕೆ ಅವರು ಮಾತನಾಡಲಿಲ್ಲ.?. ಲೋಕಸಭೆಯಲ್ಲಿ ಕೂಡಾ ದೃಷ್ಟಿಬೊಟ್ಟಿನಂತಿರುವ ಡಿ.ಕೆ.ಸುರೇಶ್‌ ಸೇರಿ ಹಲವು ಕಾಂಗ್ರೆಸ್‌ ನಾಯಕರಿದ್ದಾರೆ. ಅವರು ಯಾಕೆ ಇನ್ನೂ ಈ ಬಗ್ಗೆ ಪ್ರಶ್ನೆ ಮಾಡಿಲ್ಲ ಎಂದು ಆರ್‌.ಅಶೋಕ್‌ ಪ್ರಶ್ನೆ ಮಾಡಿದರು.

ಹತ್ತು ವರ್ಷಗಳಿಂದ ಡಿ.ಕೆ.ಸುರೇಶ್‌ ಸೇರಿ ಹಲವರು ಲೋಕಸಭೆಯಲ್ಲಿದ್ದಾರೆ. ಅವರು ಈ ಹತ್ತು ವರ್ಷಗಳಲ್ಲಿ ಬರದ ಬಗ್ಗೆಯಾಗಲೀ, ರಾಜ್ಯಕ್ಕೆ ನೀಡುವ ಅನುದಾನದ ಬಗ್ಗೆಯಾಗಲೀ ಎಷ್ಟು ಸಲ ಪ್ರಶ್ನೆ ಮಾಡಿದ್ದಾರೆ. ಇಷ್ಟು ದಿನ ಇಲ್ಲದೇ ಇದ್ದದ್ದು ಚುನಾವಣೆ ಸಮಯದಲ್ಲಿ ಯಾಕೆ ಆರೋಪ ಮಾಡುತ್ತಿದ್ದಾರೆ ಎಂದು ಆರ್‌.ಅಶೋಕ್‌ ಪ್ರಶ್ನೆ ಮಾಡಿದರು.  ಹಾಗಾದರೆ 9 ವರ್ಷ ಕೇಂದ್ರ ಸರ್ಕಾರ ಸರಿಯಾಗಿ ಅನುದಾನ ನೀಡಿದೆಯಾ..? ಈ ವರ್ಷ ಮಾತ್ರ ಅನುದಾನ ಕೊಟ್ಟಿಲ್ಲವೇ..? ಎಂದು ಕೇಳಿದ ಅಶೋಕ್‌, ಕಾಂಗ್ರೆಸ್‌ ಚುನಾವಣಾ ಸ್ಟಂಟ್‌ ಮಾಡುತ್ತಿದೆ ಎಂದು ಆರೋಪಿಸಿದರು.

ಸಿಎಂ ಸಿದ್ದರಾಮಯ್ಯ ಅವರಿಗೆ ಆಗ್ರಹ ಮಾಡುತ್ತೇನೆ. ೨೦೦೪ರಲ್ಲಿ ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದರು. ೨೦೦೦೪ರಿಂದ ೨೦೧೪ರವರೆಗೂ ಹತ್ತು ವರ್ಷದ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಆಡಳಿತ ಮಾಡಿತ್ತು. ಆ ಹತ್ತು ವರ್ಷಗಳಲ್ಲಿ ಎಷ್ಟು ಹಣವನ್ನು ರಾಜ್ಯಕ್ಕೆ ಬಿಡುಗಡೆ ಮಾಡಿದರು. ಬರ ಪರಿಹಾರಕ್ಕೆ, ರೈಲ್ವೆಗೆ, ರೋಡ್‌ಗೆ ಎಷ್ಟು ಹಣ ಬಿಡುಗಡೆ ಮಾಡಿದರು, ಕುಡಿಯುವ ನೀರಿಗೆ ಎಷ್ಟು ಹಣ ಬಿಡುಗಡೆ ಮಾಡಿದರು..? ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಹತ್ತು ವರ್ಷದಲ್ಲಿ ರಾಜ್ಯಕ್ಕೆ ಬಿಡುಗಡೆಯಾದ ಹಣ ಎಷ್ಟು..? ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಬಿಡುಡಗೆಯಾದ ಹಣ ಎಷ್ಟು ಅನ್ನೋದನ್ನು ರಾಜ್ಯ ಸರ್ಕಾರ ಶ್ವೇತ ಪತ್ರ ಬಿಡುಗಡೆ ಮಾಡಲಿ. ಆದ್ರೆ ಅದನ್ನು ಅವರು ಮಾಡೋದಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಬರೀ ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. ನಾವು ಒಂದು ಕೇಳಿದರೆ ಅವರು ಬೇರೆ ಏನನ್ನೋ ಹೇಳುತ್ತಾರೆ ಎಂದು ಆರ್‌.ಅಶೋಕ್‌ ಆರೋಪ ಮಾಡಿದರು.

 

Share Post