BengaluruCrime

ಹೋಟೆಲ್‌ ಬಳಿ ಯುವತಿಗೆ ಬ್ಯಾಡ್‌ ಟಚ್‌; ಮೂವರು ಪ್ಲ್ಯಾನ್‌ ಮಾಡಿ ಕೃತ್ಯ

ಬೆಂಗಳೂರು; ಬೆಂಗಳೂರಿನಲ್ಲಿ ಜನನಿಬಿಡ ಪ್ರದೇಶಗಳಲ್ಲಿ ಕಾಮುಕರ ಅಟ್ಟಹಾಸ ಮುಂದುವರೆದಿದೆ. ಯುವತಿಯರನ್ನು ಗುರಿಯಾಗಿಸಿಕೊಂಡು ಕೆಲ ಕಾಮುಕರು ಅವರನ್ನು ಯಾವುದೋ ನೆಪದಲ್ಲಿ ಮುಟ್ಟಿ ವಿಕೃತ ಆನಂದಪಡುತ್ತಾರೆ. ಇಂತಹ ಹಲವಾರು ಘಟನೆಗಳು ಈಗಾಗಲೇ ಬೆಳಕಿಗೆ ಬಂದಿವೆ. ಈ ನಡುವೆ ಮತ್ತೊಂದು ಇಂತಹದ್ದೇ ಒಂದು ಪ್ರಕರಣ ಬಯಲಾಗಿದೆ. ವಿಜಯನಗರದ ಹೋಟೆಲ್‌ ಒಂದರ ಮುಂದೆ ನಿಂತಿದ್ದ ಯುವತಿಗೆ ಯುವಕನೊಬ್ಬ ಬೇಕಂತಲೇ ಬ್ಯಾಡ್‌ ಟಚ್‌ ಮಾಡಿದ್ದಾನೆ.

ವಿಜಯನಗರದ ನಮ್ಮೂಟ ಹೋಟೆಲ್‌ ನಳಿ ಯುವತಿ ನಿಂತಿದ್ದಳು. ಈ ವೇಳೆ ಬಂದ ಯುವಕನೊಬ್ಬ ಬೇಕಂತಾನೇ ಆಕೆಯನ್ನು ಮುಟ್ಟಿದ್ದಾನೆ. ಮೂವರು ಯುವಕರು ಪ್ಲ್ಯಾನ್‌ ಮಾಡಿ ಈ ಕೃತ್ಯ ಎಸಗಲಾಗಿದೆ. ಮೂವರು ಯುವಕರು ಮೊದಲು ಮಾತನಾಡಿಕೊಳ್ತಾರೆ. ನಂತರ ಬ್ಯಾಡ್‌ ಟಚ್‌ ಮಾಡಲೆಂದೇ ಒಬ್ಬ ಯುವಕ ಹೋಗುತ್ತಾನೆ. ಹೋಟೆಲ್‌ಗೆ ಬಂದಿದ್ದ ಯುವತಿಯನ್ನು ಬ್ಯಾಡ್‌ ಟಚ್‌ ಮಾಡುತ್ತಾನೆ. ಈ ದೃಶ್ಯಗಳು ಹೋಟೆಲ್‌ನ ಸಿಸಿಟಿವಿಯಲ್ಲಿ ದಾಖಲಾಗಿದೆ.

ಘಟನೆ ಸಂಬಂಧ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

 

Share Post