ಮದ್ಯಪ್ರಿಯರಿಗೆ ಶಾಕ್ ಕೊಟ್ಟ ಸರ್ಕಾರ; ರಾಜ್ಯದಲ್ಲಿ ಲಿಕ್ಕರ್ ಬೆಲೆ ಹೆಚ್ಚಳ
ಬೆಂಗಳೂರು; ಐದು ಗ್ಯಾರೆಂಟಿಗಳನ್ನು ಜಾರಿ ಮಾಡಿರುವ ರಾಜ್ಯ ಸರ್ಕಾರ ಆರಂಭದಲ್ಲೇ ಮದ್ಯದ ಬೆಲೆ ಏರಿಕೆ ಮಾಡಿತ್ತು. ಇದೀಗ ಮತ್ತೆ ಮದ್ಯದ ಬೆಲೆ ಜಾಸ್ತಿ ಮಾಡಿ ಮದ್ಯಪ್ರಿಯರಿಗೆ ಶಾಕ್ ನೀಡಿದೆ. ಅದೂ ಕೂಡಾ ಬಡವರ ನೆಚ್ಚಿನ ಬ್ರಾಂಡ್ಗಳ ದರವನ್ನೇ ಏರಿಕೆ ಮಾಡಲಾಗಿದೆ. ಈ ಹಿಂದೆ ಎಲ್ಲಾ ಮದ್ಯದ ಬೆಲೆಯನ್ನು ಶೇಕಡಾ 17ರಷ್ಟು ಏರಿಕೆ ಮಾಡಲಾಗಿತ್ತು. ಈಗ ಮತ್ತೆ ಆಯ್ದ ಬ್ರಾಂಡ್ಗಳ ಮೇಲೆ ಕ್ವಾಟರ್ಗೆ 20 ರಿಂದ 30 ರೂಪಾಯಿ ಏರಿಕೆ ಮಾಡಲಾಗಿದೆ.
ಯಾವ ಬ್ರಾಂಡ್ಗೆ ಎಷ್ಟು ರೇಟು..?
======================
ಓಟಿ(180 ಎಂಎಲ್); 111 ರೂಪಾಯಿ ( ಹಿಂದಿನ ದರ 90 ರೂಪಾಯಿ)
ಬಿಪಿ(180 ಎಂಎಲ್); 145 ರೂಪಾಯಿ (ಹಿಂದಿನ ದರ 110 ರೂಪಾಯಿ)
8PM(180 ಎಂಎಲ್); 111 ರೂಪಾಯಿ (ಹಿಂದಿನ ದರ 90 ರೂಪಾಯಿ)