BengaluruCrime

ಸ್ನೇಹಿತನ ಜೊತೆ ಮಲಗಲು ಪತ್ನಿಗೆ ಒತ್ತಡ; ಬೆಂಗಳೂರಲ್ಲಿ ವೈಫ್‌ ಸ್ವ್ಯಾಪಿಂಗ್‌ ಎಂಬ ಕೆಟ್ಟ ಸಂಸ್ಕೃತಿ

ಬೆಂಗಳೂರು; ವೈಫ್‌ ಸ್ವ್ಯಾಪಿಂಗ್‌ ಎಂಬ ಕೆಟ್ಟ ಸಂಪ್ರದಾಯ ಪಾಶ್ಚಾತ್ಯ ದೇಶಗಳಲ್ಲಿ ಹೆಚ್ಚಿದೆ. ಇದು ದಶಕದ ಹಿಂದೆಯೇ ನಮ್ಮ ಭಾರತಕ್ಕೂ ಕಾಲಿಟ್ಟಿದೆ. ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವವರು ಪತ್ನಿಯರನ್ನು ಬದಲಾಯಿಸಿಕೊಳ್ಳುವ ಅನಿಷ್ಟ ಸಂಪ್ರದಾಯ ಬೆಂಗಳೂರಲ್ಲೂ ಅಲ್ಲಲ್ಲಿ ನಡೆಯುತ್ತಿದೆ. ಆಗಾಗ ಇಂತಹ ಘಟನೆಗಳ ಬಗ್ಗೆ ಸುದ್ದಿಯಾಗುತ್ತಿರುತ್ತದೆ. ಇದೀಗ ಅಂತಹದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಸ್ನೇಹಿತನ ಜೊತೆ ರಾತ್ರಿ ಕಳೆಯುವಂತೆ ಗಂಡ ಪೀಡಿಸುತ್ತಿದ್ದಾನೆ ಎಂದು ಮಹಿಳೆಯೊಬ್ಬರು ಬಸವನಗುಡಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೇರಳದಲ್ಲಿ ಇಂತಹ ಪ್ರಕರಣ ಇತ್ತೀಚೆಗೆ ಹೆಚ್ಚಾಗಿವೆ. ಬೆಂಗಳೂರಲ್ಲೂ ಕೂಡಾ ವೀಕೆಂಡ್‌ ಪಾರ್ಟಿ ಸಂದರ್ಭದಲ್ಲಿ ಪತ್ನಿಯನ್ನು ಬದಲಾಯಿಸಿಕೊಳ್ಳುವ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಒಮ್ಮೊಮ್ಮೆ ಇಬ್ಬರ ಸಹಮತದೊಂದಿಗೆ ಇಂತಹ ಹೀನ ಕೃತ್ಯಗಳು ನಡೆಯುತ್ತವೆ. ಇನ್ನು ಕೆಲವು ಕಡೆ ಬಲವಂತದ ವೈಫ್‌ ಸ್ವ್ಯಾಪಿಂಗ್‌ ನಡೆಯುತ್ತದೆ. ಹೀಗೆ ಬಲವಂತದ ವೈಫ್‌ ಸ್ವ್ಯಾಪಿಂಗ್‌ ನಡೆದಾಗ ಮಾತ್ರ ಪ್ರಕರಣ ಬೆಳಕಿಗೆ ಬರುತ್ತದೆ.

ಬಸವನಗುಡಿಯಲ್ಲಿ ವಾಸವಿರುವ ಪೂರ್ಣಚಂದ್ರ ಎಂಬಾತನೇ ತನ್ನ ಪತ್ನಿಯನ್ನು ಸ್ನೇಹಿತನ ಜೊತೆ ಮಲಗುವಂತೆ ಪೀಡಿಸಿದ ವ್ಯಕ್ತಿ ಎಂದು ಆರೋಪಿಸಲಾಗಿದೆ. ಇದನ್ನು ಪತ್ನಿ ಒಪ್ಪಿಲ್ಲ. ಇದರಿಂದಾಗಿ ಪೂರ್ಣಚಂದ್ರ ತನ್ನ ಪತ್ನಿ ಮೇಲೆ ಹಲ್ಲೆ ಮಾಡಿದ್ದಾನಂತೆ. ಮಹಿಳೆ ನೀಡಿದ ದೂರಿದ ಆಧಾರದ ಮೇಲೆ ಪೂರ್ಣಚಂದ್ರ ಹಾಗೂ ಆತನ ಪೋಷಕರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿಕೊಳ್ಳಲಾಗಿದೆ.

ಅಂದಹಾಗೆ ಪೂರ್ಣಚಂದ್ರ ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ. ಕಾಮಾಕ್ಷಿಪಾಳ್ಯದ ಸ್ವಯಂಪ್ರಭಾ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಮದುವೆ ಸಮಯದಲ್ಲೂ ಹುಡುಗಿ ಕಡೆಯವರು ಪೂರ್ಣಚಂದ್ರಗೆ ವರದಕ್ಷಿಣೆ ನೀಡಿದ್ದರು. ಅನಂತರ ಮದುವೆಗೆ ನಾನು ಹತ್ತು ಲಕ್ಷ ರೂಪಾಯಿ ಸಾಲ ಮಾಡಿದ್ದು, ಅದನ್ನು ತರುವಂತೆ ಪತ್ನಿಗೆ ಪೀಡಿಸುತ್ತಿದ್ದಂತೆ. ಹೀಗಾಗಿ ಮಹಿಳೆಯ ಅಣ್ಣ ಎರಡು ಲಕ್ಷ ರೂಪಾಯಿ ಕೊಟ್ಟಿದ್ದನಂತೆ. ಇದಕ್ಕೆ ತೃಪ್ತಿಯಾಗದ ಆರೋಪಿ ಪೂರ್ಣಚಂದ್ರ, ಉಳಿದ 8 ಲಕ್ಷ ರೂಪಾಯಿ ತರುವಂತೆ ಪತ್ನಿಗೆ ಕಿರುಕುಳ ಕೊಡುತ್ತಿದ್ದಂತೆ.

ಪತ್ನಿಗೆ ಬೆಲ್ಟ್‌ನಿಂದ ಹೊಡೆಯುವುದು. ಅಶ್ಲೀಲ ವಿಡಿಯೋಗಳನ್ನು ಪತ್ನಿಗೆ ತೋರಿಸುವುದು. ಸ್ನೇಹಿತರ ಜೊತೆ ಈ ರೀತಿಯಾಗಿ ಮಾಡು ಎಂದು ಪೀಡಿಸುವುದು ಮಾಡುತ್ತಿದ್ದನಂತೆ. ಇದರಿಂದ ನೊಂದು ಮಹಿಳೆ ದೂರು ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ದಶಕದ ಹಿಂದೆ ಇಂತಹದ್ದೊಂದು ವೈಫ್‌ ಸ್ವ್ಯಾಪಿಂಗ್‌ ಪ್ರಕರಣ ಬೆಳಕಿಗೆ ಬಂದಿತ್ತು. ಪ್ರಮುಖ ಸುದ್ದಿ ವಾಹಿನಿಯೊಂದು ಸ್ಟಿಂಗ್‌ ಆಪರೇಷನ್‌ ಮಾಡಿ, ಇಂತಹದ್ದೊಂದು ಅನಿಷ್ಟ ಬೆಂಗಳೂರಿನಲ್ಲಿ ನಡೆಯುತ್ತಿದೆ ಎಂಬುದನ್ನು ಪ್ರಪಂಚಕ್ಕೆ ತೋರಿಸಿತ್ತು. ಜನ ಇದನ್ನು ನೋಡಿ ಬೆಚ್ಚಿಬಿದ್ದಿದ್ದರು. ವೀಕೇಂಡ್‌ ಪಾರ್ಟಿಯೊಂದರಲ್ಲಿ ಒಂದಷ್ಟು ಟೆಕ್ಕಿಗಳ ಜೋಡಿಗಳು ಭಾಗವಹಿಸಿದ್ದವು. ಈ ವೇಳೆ, ಅವರ ಮನೆಗಳ ಕೀಗಳನ್ನು ಒಂದು ಕಡೆ ಹಾಕಿ, ಗಂಡಸರಿಗೆ ಬಟ್ಟೆ ಕಟ್ಟಿ ಒಂದು ಕೀ ತೆಗೆದುಕೊಳ್ಳುವಂತೆ ಸೂಚಿಸಲಾಗುತ್ತದೆ. ಆಗ ಆತನಿಗೆ ಯಾವ ಮನೆಯ ಕೀ ಸಿಗುತ್ತದೆ. ಆ ಮನೆಯ ಹೆಣ್ಣಿನ ಆ ರಾತ್ರಿ ಅವರ ಮನೆಯಲ್ಲಿ ಕಳೆಯುವುದು. ಹೀಗೆ ಎಲ್ಲರೂ ಒಪ್ಪಿಯೇ ಇಂತಹದ್ದೊಂದು ವೈಫ್‌ ಸ್ವ್ಯಾಪಿಂಗ್‌ ಗೇಮ್‌ ನಡೆಯುತ್ತಿರುವ ಬಗ್ಗೆ ಮಾಹಿತಿ ಅರಿತಿದ್ದ ಚಾನಲ್‌ ಒಂದು ಸ್ಟಿಂಗ್‌ ಆಪರೇಷನ್‌ ಮೂಲಕ ಬಯಲಿಗೆಳೆದಿತ್ತು. ಇದಾದ ಮೇಲೆ ಹಲವು ಪ್ರಕರಣ ಬೆಳಕಿಗೆ ಬಂದಿದ್ದವು.

Share Post