ಕೆಸಿಆರ್ಗೆ ಶಸ್ತ್ರಚಿಕಿತ್ಸೆ ಯಶಸ್ವಿ; ನಡೆಯುತ್ತಿದ್ದಾರೆ ತೆಲಂಗಾಣ ಮಾಜಿ ಸಿಎಂ
ಹೈದರಾಬಾದ್; ಇತ್ತೀಚೆಗೆ ತೆಲಂಗಾಣ ಮಾಜಿ ಸಿಎಂ ಕೆಸಿಆರ್ ಅವರು ಅವರ ತೋಟದ ಮನೆಯ ಬಚ್ಚಲಿನಲ್ಲಿ ಜಾರಿ ಬಿದ್ದಿದ್ದರು. ಇದರಲ್ಲಿ ಅವರ ಸೊಂಟದ ಎಡಭಾಗದಲ್ಲಿ ಮೂಳೆ ಮುರಿದಿತ್ತು. ಹೀಗಾಗಿ ಕಳೆದ ರಾತ್ರಿ ಅವರಿಗೆ ಲೆಫ್ಟ್ ಟೋಟಲ್ ಹಿಪ್ ರಿಪ್ಲೇಸ್ಮೆಂಟ್ ಮಾಡಲಾಗಿದೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಈಗ ಅವರಿಗೆ ನಡೆಯುವ ಪ್ರಾಕ್ಟೀಸ್ ಮಾಡಿಸಲಾಗುತ್ತಿದೆ. ಕೆಸಿಆರ್ ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಿದ್ದಾರೆ.
ಹೈದರಾಬಾದ್ನ ಯಶೋದ ಆಸ್ಪತ್ರೆಯಲ್ಲಿ ಕೆಸಿಆರ್ಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಎರಡು ಮೂರು ದಿನದಲ್ಲಿ ಕೆಸಿಆರ್ ಡಿಸ್ಚಾರ್ಜ್ ಆಗಬಹುದು. ಆದರೆ ಆರರಿಂದ ಎಂಟು ವಾರ ಅವರಿಗೆ ರೆಸ್ಟ್ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.