Sports

IPL 2022: RCB ಅಭಿಮಾನಿಗಳಿಗೆ ಗುಡ್​ ನ್ಯೂಸ್: ಮತ್ತೆ ಬರ್ತಾರಂತೆ ABD

ಬೆಂಗಳೂರು :  ಆರ್​ಸಿಬಿ ತಂಡದ ಆಪತ್ಭಾಂಧವ ಎಬಿ ಡಿವಿಲಿಯರ್ಸ್​ ಕಳೆದ ತಿಂಗಳಷ್ಟೇ ಎಲ್ಲಾ ಮಾದರಿಯ ಕ್ರಿಕೆಟ್ ವಿದಾಯ ಹೇಳಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಈ ಹಿಂದೆಯೇ ನಿವೃತ್ತಿ ಘೋಷಿಸಿದ್ದ ಎಬಿಡಿ ಆ ಬಳಿಕ ಲೀಗ್ ಕ್ರಿಕೆಟ್​ನಲ್ಲಿ ಮುಂದುವರೆದಿದ್ದರು. ಆರ್​ಸಿಬಿ ಪರ ವಿರಾಟ್‌ ಕೊಹ್ಲಿ ಬಳಿಕ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎಂಬ ದಾಖಲೆ ಕೂಡ ಎಬಿಡಿ ಹೆಸರಿನಲ್ಲಿದೆ. ಇದಾಗ್ಯೂ ದಿಢೀರಣೆ ನಿವೃತ್ತಿ ಘೋಷಿಸಿ ಎಬಿಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು.

 

ಎಬಿಡಿ ಅವರ ಈ ನಿರ್ಧಾರ ಆರ್​ಸಿಬಿ ಅಭಿಮಾನಿಗಳ ನೋವಿಗೆ ಕಾರಣವಾಗಿತ್ತು. ಆದರೀಗ ಎಬಿಡಿ ಮತ್ತೆ ಆರ್​ಸಿಬಿಗೆ ಕಂಬ್ಯಾಕ್ ಸಾಧ್ಯತೆಯಿದೆ. ಆದರೆ ಈ ಬಾರಿ ಆಟಗಾರನಾಗಿ ಅಲ್ಲ ಬದಲಾಗಿ ಕೋಚ್ ರೂಪದಲ್ಲಿ ಎಂಬುದು ವಿಶೇಷ.

ಎಬಿ ಡಿವಿಲಿಯರ್ಸ್​ ಆರ್​ಸಿಬಿ ತಂಡದ ಬ್ಯಾಟಿಂಗ್ ಕೋಚ್ ಆಗುವ ಸಾಧ್ಯತೆಯಿದೆ. ಈ ಬಗ್ಗೆ ಮಾಹಿತಿ ನೀಡಿರುವ ಆರ್​ಸಿಬಿ ತಂಡ ಕೋಚ್ ಸಂಜಯ್ ಬಂಗಾರ್, ಪ್ರತಿ ತಂಡಕ್ಕೂ ಬ್ಯಾಟಿಂಗ್ ಕೋಚ್ ಇರಬೇಕಾಗಿರುವುದು ಅನಿವಾರ್ಯ. ಅದರಲ್ಲೂ ಎಬಿಡಿ ಅವರಂತಹ ಆಟಗಾರನಿಗೆ ಬ್ಯಾಟಿಂಗ್ ಕೋಚ್ ಸ್ಥಾನ ನೀಡುವುದು ಅದು ತಂಡಕ್ಕೆ ಮತ್ತು ಆಟಗಾರರಿಗೆ ಒಳ್ಳೆಯದು ಎಂದಿದ್ದಾರೆ.

Share Post