International

ಹಮಾಸ್‌ ಕಮಾಂಡರ್‌ನನ್ನು ಕೊಂದಿದ್ದೇವೆ; ಇಸ್ರೇಲ್‌

ಅಕ್ಟೋಬರ್‌ ಏಳರ  ರಾಕೆಟ್ ದಾಳಿಯ ಮಾಸ್ಟರ್ ಮೈಂಡ್ ಹಮಾಸ್ ಕಮಾಂಡರ್ ಅನ್ನು ಕೊಂದಿರುವುದಾಗಿ ಇಸ್ರೇಲ್ ಘೋಷಿಸಿದೆ. ಹಮಾಸ್‌ನ ಗುಪ್ತಚರ ವಿಭಾಗದ ಉಪ ಮುಖ್ಯಸ್ಥ ಶಾದಿ ಬರುದ್‌ನನ್ನು ತನ್ನ ಫೈಟರ್ ಜೆಟ್‌ಗಳು ಹೊಡೆದುರುಳಿಸಿವೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಹೇಳಿದೆ.

“ಗಾಜಾದಲ್ಲಿ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಅವರೊಂದಿಗೆ ಕ್ರೂರ ರಾಕೆಟ್ ದಾಳಿಯನ್ನು ಬರುದ್ ಯೋಜಿಸಿದ್ದರು” ಎಂದು ಐಡಿಎಫ್ ವೈಮಾನಿಕ ದಾಳಿಯ ವೀಡಿಯೊದಲ್ಲಿ ಘೋಷಿಸಿತು.

ಇನ್ಇನುಸ್ರೇಲ್‌ನ ಪೂರ್ವ ಗಡಿ ಪ್ರದೇಶದ ತಾಝಾದಲ್ಲಿನ ವೈದ್ಯಕೀಯ ಕೇಂದ್ರದಲ್ಲಿ ಸ್ಫೋಟ ಸಂಭವಿಸಿದೆ ಎಂದು ಈಜಿಪ್ಟ್ ಮಾಧ್ಯಮ ಔಟ್‌ಲೆಟ್ ಅಲ್-ಖಹೇರಾ ಹೇಳಿದೆ. ಕ್ಷಿಪಣಿಯಿಂದ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದ್ದರೂ ಅದನ್ನು ಯಾರು ಉಡಾಯಿಸಿದ್ದಾರೆ ಎಂಬುದು ಬಹಿರಂಗವಾಗಿಲ್ಲ.

 

Share Post