CrimeDistricts

ಹಬ್ಬಕ್ಕೆ ತಾವರೆ ಕೀಳಲು ಹೋದ ತಂದೆ-ಮಗ ದುರ್ಮರಣ..!

ಚಿಕ್ಕಬಳ್ಳಾಪುರ; ನಾಳೆ ವರ ಮಹಾಲಕ್ಷ್ಮೀ ಹಬ್ಬ ಇದೆ. ಈ ಹಿನ್ನೆಲೆಯಲ್ಲಿ ಸಂಭ್ರಮ ಸಡಗರ ಮನೆ ಮಾಡಿದೆ. ಅಂದಹಾಗೆ ಲಕ್ಷ್ಮೀಗೆ ವಿಶೇಷ ಎನಿಸುವ ತಾವರೆ ಹೂವಿಗೆ ಎಲ್ಲೆಡೆ ಬೇಡಿಕೆ ಇದೆ. ಹಳ್ಳಿ ಪ್ರದೇಶದಲ್ಲಿ ಕೆರೆ-ಕುಂಟೆಗಳಲ್ಲಿ ತಾವರೆ ಬೆಳೆದಿರುತ್ತದೆ. ಅದನ್ನು ಕಿತ್ತುತಂದು ಪೂಜೆಯಲ್ಲಿ ಬಳಸುತ್ತಾರೆ. ಅದೇ ರೀತಿಯಲ್ಲಿ ಲಕ್ಷ್ಮೀ ಪೂಜೆಗೆಂದು ಕರೆಯಲ್ಲಿ ಬೆಳೆದಿದ್ದ ತಾವರೆ ಹೂವು ಕೀಳಲು ಹೋದ ತಂದೆ-ಮಗ ನೀರು ಪಾಲಾಗಿರುವ ಘಟನೆ ದೊಡ್ಡ ಬಳ್ಳಾಪುರ ಬಳಿ ನಡೆದಿದೆ.

ಇಲ್ಲಿನ ಭೂಚನಹಳ್ಳಿ ಗ್ರಾಮದ ಕೆರೆಯಲ್ಲಿ ಈ ಘಟನೆ ನಡೆದಿದೆ. ಪುಟ್ಟರಾಜು ಹಾಗೂ ಕೇಶವ ಮೃತ ದುರ್ದೈವಿಗಳು. ಇವರು ದೊಡ್ಡಬಳ್ಳಾಪುರದ ಶಾಂತಿನಗರ ನಿವಾಸಿಗಳಾಗಿದ್ದು, ವ್ಯಾಪಾರಕ್ಕಾಗಿ ಭೂಚನಹಳ್ಳಿಯ ಕೆರೆಯಲ್ಲಿ ಬೆಳೆದಿದ್ದ ತಾವರೆ ಹೂವುಗಳನ್ನು ಕೀಳಲು ಬಂದಿದ್ದರು. ಕೆರೆಯ ದಡದಲ್ಲಿ ಮೊಬೈಲ್‌ ಹಾಗೂ ಚಪ್ಪಲಿಗಳನ್ನು ಬಿಟ್ಟು ಇಬ್ಬರೂ ನೀರಿಗಿಳಿದು ತಾವರೆ ಕೀಳಲು ಆರಂಭಿಸಿದ್ದಾರೆ. ಈ ವೇಳೆ ಕೆಸರಲ್ಲಿ ಸಿಲುಕಿದಿದ್ದು, ಇಬ್ಬರೂ ಮೃತಪಟ್ಟಿದ್ದಾರೆ.

ಮತ್ತೊಬ್ಬ ತಾವರೆ ಹೂವಿನ ಮಾರಾಟ ಅದೇ ಕೆರೆ ಬಳಿ ಹೋದಾಗ ಘಟನೆ ನಡೆದಿರುವುದು ಬೆಳೆಕಿಗೆ ಬಂದಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ, ಮೃತದೇಹಗಳನ್ನು ಹೊರತೆಗೆದಿದ್ದಾರೆ. ದೊಡ್ಡಬೆಳವಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share Post