ಆನ್‌ಲೈನ್ ಗೇಮ್; 79 ಲಕ್ಷ ಕಳೆದುಕೊಂಡ ಯುವಕ, 18 ಎಕರೆ ಜಮೀನು ಮಾರಿದ..!
ರಾಯಚೂರು; ಆನ್‌ಲೈನ್ ಗೇಮ್ ಆಡಿ ಬಹುಬೇಗ ಶ್ರೀಮಂತನಾಗಬಹುದು ಎಂದುಕೊಂಡ ಯುವಕನೊಬ್ಬ ಕೊನೆಗೆ ಬೀದಿಪಾಲಾಗಿದ್ದಾರೆ. 18 ಎಕರೆ ಜಮೀನು ಸೇರಿ ಒಟ್ಟು 79 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ. ರಾಯಚೂರಿನ ಲಿಂಗಸಗೂರಿನ ಮುದಗಲ್ ಗ್ರಾಮದ ಯುವಕನೇ ಇಷ್ಟು ಹಣ ಕಳೆದುಕೊಂಡ ಯುವಕ.
ಸಹದೇವಪ್ಪ ಎಂಬ ಯುವಕ ಹಲವು ಜೂಜು ಆಪ್‌ಗಳಲ್ಲಿ ಹಣ ಹೂಡಿ ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದಾನೆ. ಕ್ರೈನೈನ್ ಡೇಸ್, ಅಪೆಕ್ಸ್ ನೈನ್, ರಾಧಾ ಎಕ್ಸಚೇಂಜ್, ಬೆಟ್ 365, ರಮ್ಮಿ, ಕ್ರಿಕೆಟ್, ಕ್ಯಾಸಿನೋ ಆಪ್‌ಗಳಿಂದ ಈತ ಹಣ ಕಳೆದುಕೊಂಡಿದ್ದಾನೆ. ಒಟ್ಟು 79 ಲಕ್ಷ ರೂಪಾಯಿ ಕಳೆದಿದ್ದು, ಇದಕ್ಕಾಗಿ ಒಟ್ಟು 18 ಎಕರೆ ಜಮೀನು ಕೂಡಾ ಮಾರಿದ್ದಾನೆ.
ಆ್ಯಪ್ ಡೀಲರ್ ಮೈನುದ್ದೀನ್, ಚನ್ನಬಸವ, ರುದ್ರಗೌಡ, ಹನುಮನಗೌಡ ಎಂಬವವರು ನನಗೆ ಮೋಸ ಮಾಡಿದ್ದಾರೆ ಅಂತ ಸಹದೇವಪ್ಪ ಆರೋಪ ಮಾಡುತ್ತಿದ್ದಾರೆ. ಡೀಲರ್‌ಗಳು ನನ್ನಿಂದ ಹಣ ಪಡೆದು ಲಾಗಿನ್ ಐಡಿ, ಪಾಸ್‌ವರ್ಡ್ ನೀಡುತ್ತಿದ್ದರು. ಹಣ ದುಪ್ಪಟ್ಟು ಮಾಡಿಕೊಡುವುದಾಗಿ ಹೇಳುತ್ತಿದ್ದರು. ಆದ್ರೆ, ಇದನ್ನು ನಂಬಿ ಎಲ್ಲವನ್ನೂ ಕಳೆದುಕೊಂಡೆ ಎಂದು ಸಹದೇವಪ್ಪ ಆರೋಪ ಮಾಡಿದ್ದಾನೆ. ಈ ಸಂಬಂಧ ರಾಯಚೂರು ಎಸ್‌ಪಿಗೆ ದೂರು ಕೊಟ್ಟಿದ್ದಾನೆ.