ಕೇಂದ್ರ ಸಚಿವರಿಗೆ ಬೆತ್ತಲೆ ವಿಡಿಯೋ ಕಾಲ್; ಬ್ಲ್ಯಾಕ್ ಮೇಲ್ ಮಾಡುತ್ತಿದ್ದವರ ಬಂಧನ
ಜೈಪುರ; ವಿಡಿಯೋ ಕಾಲ್ ಮಾಡಿ ಅದರಲ್ಲಿ ಬೆತ್ತಲೆ ವಿಡಿಯೋಗಳನ್ನು ತೋರಿಸಿ ರೆಕಾರ್ಡ್ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಅದ್ರಲ್ಲೂ ದೊಡ್ಡ ದೊಡ್ಡ ಅಧಿಕಾರಿಗಳು, ರಾಜಕಾರಣಿಗಳಿಗೂ ಇಂತ ಬ್ಲ್ಯಾಕ್ಮೇಲ್ಗಳು ಹೆಚ್ಚಾಗುತ್ತಿವೆ. ಇದೀಘ ಕೇಂದ್ರ ಸಚಿವರೊಬ್ಬರಿಗೇ ಈ ರೀತಿಯಾಗಿ ಬ್ಲ್ಯಾಕ್ ಮೇಲ್ ಮಾಡಲಾಗಿದೆ. ಈ ಸಂಬಂಧ ರಾಜಸ್ಥಾನ ಮೂಲದ ಇಬ್ಬರು ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದು, ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಕಳೆದ ಜೂನ್ ತಿಂಗಳಲ್ಲಿ ಕೇಂದ್ರ ಸಚಿವರೊಬ್ಬರಿಗೆ ವಾಟ್ಸಾಪ್ ಮೂಲಕ ವಿಡಿಯೋ ಕರೆ ಮಾಡಲಾಗಿದೆ. ಅವರು ಕರೆ ಸ್ವೀಕಾರ ಮಾಡಿದಾಗ ಅಶ್ಲೀಲ ವಿಡಿಯೋ ಪ್ರದರ್ಶನ ಮಾಡಿದ್ದಾರೆ. ಅದನ್ನು ಅವರು ರೆಕಾರ್ಡ್ ಮಾಡಿಕೊಂಡಿದ್ದಾರೆ. ನಂತರ ಕರೆ ಕಟ್ ಮಾಡಿದ್ದಾರೆ. ಅನಂತರ ರೆಕಾರ್ಡ್ ಮಾಡಿಕೊಂಡ ವಿಡಿಯೋವನ್ನು ಸಚಿವರಿಗೆ ತೋರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿಯೂ ಬೆದರಿಕೆ ಹಾಕಿದ್ದರು.
ಈ ಬಗ್ಗೆ ಕೇಂದ್ರ ಸಚಿವರು ಪೊಲೀಸರಿಗೆ ದೂರು ಕೊಟ್ಟಿದ್ದರು. ಇದೀಗ ಪೊಲೀಸರು ಮೊಹಮ್ಮದ್ ವಕೀಲ್ ಮತ್ತು ಮೊಹಮ್ಮದ್ ಸಾಹಿಬ್ ಎಂಬುವವರನ್ನು ಬಂಧಿಸಿದ್ದಾರೆ.