BengaluruPolitics

ಅನ್ನ ಬೇಯಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್‌ ವಿನೂತನ ಪ್ರತಿಭಟನೆ

ಬೆಂಗಳೂರು; ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ವಿನೂತನ ಪ್ರತಿಭಟನೆ ಮಾಡುತ್ತಿದೆ. ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ನೀಡದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಕಾಂಗ್ರೆಸ್‌ ನಾಯಕರು ಪ್ರತಿಭಟನಾ ಸ್ಥಳದಲ್ಲಿ ಅನ್ನ ಬೇಯಿಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

 

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌, ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಹಲವು ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಡಿ.ಕೆ.ಶಿವಕುಮಾರ್‌ ಹಾಗೂ ರಾಮಲಿಂಗಾರೆಡ್ಡಿಯವರು ಪಾತ್ರೆಯೊಳಗೆ ಅಕ್ಕಿ ಹಾಕುವ ಮೂಲಕ ಪ್ರತಿಭಟನೆ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್‌, ಬಡವರಿಗೆ ಅನುಕೂಲ ಆಗಲಿ ಎಂದು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರುತ್ತಿದ್ದೇವೆ. ಅವುಗಳು ಜಾರಿಯಾಗುತ್ತಿವೆ. ಆದ್ರೆ, ಬೇಕಾದವರು ಅರ್ಜಿ ಹಾಕಬೇಕು. ಇದೊಂದು ಪ್ರಕ್ರಿಯೆ ಎಂದು ಹೇಳಿದರು.

 

ಬಡವರಿಗೆ ಉಚಿತವಾಗಿ ಹತ್ತು ಕೆಜಿ ಅಕ್ಕಿ ನೀಡಲು ನಾವು ನಿರ್ಧಾರ ಮಾಡಿದ್ದೇವೆ. ಆದ್ರೆ ಕೇಂದ್ರ ಸರ್ಕಾರ ಅಕ್ಕಿ ದಾಸ್ತಾನಿದ್ದರೂ ನಮಗೆ ಅಕ್ಕಿ ಕೊಡುತ್ತಿಲ್ಲ. ಖಾಸಗಿಯವರಿಗೆ ಅದು ಮಾರಾಟ ಮಾಡುತ್ತಿದೆ. ಆದ್ರೆ ನಾವು ನಿಗದಿಪಡಿಸಿದ ಹಣ ಕೊಡುತ್ತೇವೆ ಎಂದು ಕೇಳಿದರೂ ಕೊಡುತ್ತಿಲ್ಲ. ಇದು ಬಡವರ ವಿರೋಧಿ ನೀತಿ. ಕೇಂದ್ರದ ಮೋದಿ ನೇತೃತ್ವ ಸರ್ಕಾರ ಬಡವರಿಗೆ ನೀಡುವ ಅನ್ನದ ವಿಚಾರದಲ್ಲೂ ರಾಜಕೀಯ ಮಾಡುತ್ತಿದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

 

ಕೇಂದ್ರ ಸರ್ಕಾರದಿಂದ ನಾವು ಪುಕ್ಸಟ್ಟೆ ಅಕ್ಕಿ ಕೇಳಿಲ್ಲ. 34 ರೂಪಾಯಿ ಕೆಜಿಗೆ ಕೊಟ್ಟು ಖರೀದಿ ಮಾಡೋದಕ್ಕೆ ನಾವು ರೆಡಿ ಇದ್ದೇವೆ. ಇದಕ್ಕೆ ಮೊದಲು ಒಪ್ಪಿಗೆ ನೀಡಲಾಗುತ್ತು. ಆದ್ರೆ, ಈಗ ಕೊಡೋದಿಲ್ಲ ಎಂದು ಹೇಳುತ್ತಿದ್ದಾರೆ. ಅವರು ಅಕ್ಕಿ ಸಂಗ್ರಹ ಮಾಡಿದ್ದಾರೆ. ಅವರ ಬಳಿ ಬೇಕಾದಷ್ಟು ಅಕ್ಕಿ ಇದೆ. ಹೀಗಾಗಿ ಹಣ ಕೊಡುತ್ತೇವೆ ಕೊಡಿ ಎಂದು ಕೇಳಿದ್ದೇವೆ. ಆದ್ರೆ ಕೇಂದ್ರ ಸರ್ಕಾರ ಇದರಲ್ಲೂ ರಾಜಕೀಯ ಮಾಡುತ್ತಿದೆ ಎಂದು ಡಿ.ಕೆ.ಶಿವಕುಮಾರ್‌ ಆರೋಪಿಸಿದ್ದಾರೆ. ಇನ್ನು ಮಾಜಿ ಸಿಎಂ ಯಡಿಯೂರಪ್ಪ ಅವರು ಒಂದು ಕಾಳು ಕಡಿಮೆ ಕೊಟ್ಟರೂ ನಾವು ಸುಮ್ಮನಿರೋದಿಲ್ಲ ಎಂದು ಹೇಳಿದ್ದಾರೆ. ಯಡಿಯೂರಪ್ಪ ಅವರೇ ಮೋದಿಯವರು ಎಲ್ಲರ ಅಕೌಂಟ್‌ಗೆ 15 ಲಕ್ಷ ರೂಪಾಯಿ ಹಾಕುತ್ತೇವೆ ಎಂದು ಹೇಳಿದ್ದರು. ಹಾಗಾದರೆ, ಆ ಹಣ ಎಲ್ಲಿ ಎಂದು ಪ್ರಶ್ನೆ ಮಾಡಿದರು.

 

Share Post