ನಿರ್ಮಾಣ ಹಂತದ ಬೃಹತ್ ಸೇತುವೆ ಎರಡನೇ ಬಾರಿ ಕುಸಿತ
ಬಿಹಾರ; ಗಂಗಾನದಿಗೆ ಅಡ್ಡಲಾಗಿ ಕಟ್ಟುತ್ತಿದ್ದ ಸೇತುವೆ ಎಡರನೇ ಬಾರಿ ಕುಸಿತಗೊಂಡಿದೆ. ಬಿಹಾರದ ಭಾಗಲ್ಪುರದಲ್ಲಿ ಈ ಘಟನೆ ನಡೆದಿದೆ. ಆಗುವನಿ-ಸುಲ್ತಂಗಂಜ್ ನಡುವೆ ಗಂಗಾನದಿಗೆ ಅಡ್ಡಲಾಗಿ ಈ ಸೇತುವೆ ನಿರ್ಮಿಸಲಾಗುತ್ತಿದೆ. ಆದ್ರೆ ನಿರ್ಮಾಣ ಹಂತದ ಈ ಸೇತುವೆ ಸುಮಾರು 500 ಮೀಟರ್‌ನಷ್ಟು ಕುಸಿದುಬಿದ್ದಿದೆ. ಈ ವೇಳೆ ಯಾರೂ ಇಲ್ಲದ ಕಾರಣ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಎರಡು ವರ್ಷಗಳ ಹಿಂದೆ ಕೂಡಾ ಇದೇ ಸೇತುವೆಯ ಕೆಲ ಭಾಗ ಕುಸಿದುಬಿದ್ದಿತ್ತು. ಆದ್ರೆ ಮತ್ತೆ ಕಾಮಗಾರಿ ಮುಂದುವರೆಸಲಾಗಿತ್ತು. ಆದ್ರೆ ಕಳೆದ ಏಪ್ರಿಲ್‌ನಲ್ಲಿ ಉಂಟಾದ ಚಂಡಮಾರುತದಿಂದ ಸೇತುವೆಗೆ ಕೊಂಚ ಹಾನಿಯಾಗಿತ್ತು. ಇದೀಗ ಸೇತುವೆ ಕುಸಿದಿದೆ. ಇದರಿಂದಾಗಿ ಕಾಮಗಾರಿಗೆ ಹಿನ್ನಡೆಯಾದಂತಾಗಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು 23 ಫೆಬ್ರವರಿ 2014 ರಂದು ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇದರ ಅಂದಾಜು ವೆಚ್ಚ 1710 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.