ಕುನೋ ಉದ್ಯಾನದಲ್ಲಿ ಮತ್ತೊಂದು ಚೀತಾ ಸಾವು; ಏನಾಗ್ತಿದೆ ಅಲ್ಲಿ..?
ಭೋಪಾಲ್; ಭಾರತದಲ್ಲಿ ನಶಿಸಿಹೋಗಿದ್ದ ಚೀತಾಗಳ ಸಂತತಿಯನ್ನು ಬೆಳೆಸುವುದಕ್ಕಾಗಿ ದಕ್ಷಿಣ ಆಫ್ರಿಕಾದಿಂದ ತರಿಸಲಾಗಿದ್ದು, ಚೀತಾಗಳಲ್ಲಿ ಮತ್ತೊಂದು ಸಾವನ್ನಪ್ಪಿದೆ. ಇದರಿಂದ ಇದುವರೆಗೆ ಮೂರು ಚೀತಾಗಳು ಸಾವನ್ನಪ್ಪಿದಂತಾಗಿದೆ.
ಕಳೆದ ವರ್ಷದ ಸಪ್ಟೆಂಬರ್ ಹಾಗೂ ಇದೇ ಫೆಬ್ರವರಿಯಲ್ಲಿ ಒಟ್ಟು 20 ಚೀತಾಗಳನ್ನು ತರಿಸಿ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡಲಾಗಿತ್ತು. ಆದ್ರೆ ಕಳೆದ ನಲವತ್ತು ದಿನಗಳಲ್ಲಿ ಮೂರು ಚೀತಾಗಳು ಸಾವನ್ನಪ್ಪಿವೆ. ಇಂದು ದಕ್ಷ ಎಂಬ ಹೆಣ್ಣು ಚೀತಾ ಸಾವನ್ನಪ್ಪಿದೆ. ಇದನ್ನು ಉದ್ಯಾನದ ಆವರಣದಲ್ಲಿ ಬಿಡಲಾಗಿತ್ತು. ಅಲ್ಲೇ ಎರಡು ಗಂಡು ಚೀತಾಗಳಲ್ಲಿದ್ದು, ಅವುಗಳೊಂದಿಗೆ ಕಾಳಗ ನಡೆದಿದ್ದರಿಂದ ದಕ್ಷ ತೀವ್ರವಾಗಿ ಗಾಯಗೊಂಡಿತ್ತು. ತಕ್ಷಣ ಚಿಕಿತ್ಸೆ ನೀಡಲಾಯಿತಾದರೂ ಅದು ಸಾವನ್ನಪ್ಪಿದೆ.
ಕೆಲ ದಿನಗಳ ಹಿಂದೆ ಇನ್ನೂ ಎರಡು ಚೀತಾಗಳು ಸಾವನ್ನಪ್ಪಿದ್ದವು.