ನಮಗೆ ವ್ಯಕ್ತಿ ಮುಖ್ಯ ಆಗೋದಿಲ್ಲ, ಪಕ್ಷ ಮುಖ್ಯವಾಗುತ್ತದೆ; ಅಮಿತ್ ಶಾ
ಹುಬ್ಬಳ್ಳಿ; ನಮಗೆ ಪಕ್ಷ ಮುಖ್ಯವಾಗುತ್ತೆ. ಯಾವುದೇ ಕಾರಣಕ್ಕೂ ವ್ಯಕ್ತಿಗಳು ಮುಖ್ಯವಾಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಅವರು ಬಿಜೆಪಿ ಪಕ್ಷ ತೊರೆದಿದ್ದರಿಂದ ನಮಗೇನೂ ನಷ್ಟವಾಗಿಲ್ಲ. ಅವರೇ ಈ ಬಾರಿ ಸೋಲುತ್ತಾರೆ. ಅದರಲ್ಲಿ ಅನುಮಾನವೇ ಬೇಡ ಎಂದು ಹೇಳಿದ್ದಾರೆ.
ಬಿಜೆಪಿ ಪಕ್ಷ ಮೊದಲಿನಿಂದಲೂ ಲಿಂಗಾಯತ ಸಮುದಾಯದ ಪರವಾಗಿತ್ತು. ಮುಂದೆಯೂ ಇರುತ್ತದೆ. ಈ ಬಾರಿ ಅನೇಕರಿಗೆ ಟಿಕೆಟ್ ನೀಡಿಲ್ಲ. ಅದರಲ್ಲಿ ಶೆಟ್ಟರ್ ಕೂಡಾ ಒಬ್ಬರು. ಶೆಟ್ಟರ್ ಒಬ್ಬರನ್ನೇ ಕೈಬಿಟ್ಟಿಲ್ಲ ಎಂದು ಅಮಿತ್ ಶಾ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಯಾರಿಗೂ ಕೂಡಾ ನಾವು ಟಿಕೆಟ್ ತಪ್ಪಿಸೋ ಕೆಲಸ ಮಾಡಿಲ್ಲ. ಹಿರಿಯರಿಗೆ ಈ ಬಾರಿ ಅವಕಾಶ ನಿರಾಕರಿಸಲಾಗಿದೆ. ಹೊಸಬರಿಗೆ ಅವಕಾಶ ಮಾಡಿಕೊಡುವುದು ನಮ್ಮ ಉದ್ದೇಶವಾಗಿತ್ತು. ಹಾಗಂತ ಒಂದು ಜಾಗದಲ್ಲಿ ಕೂಡಾ ಲಿಂಗಾಯತರನ್ನು ತೆಗೆದ ಕಡೆ ಬೇರೆಯವರಿಗೆ ಟಿಕೆಟ್ ಕೊಟ್ಟಿಲ್ಲ. ಲಿಂಗಾಯತರಿಗೇ ಟಿಕೆಟ್ ನೀಡಲಾಗಿದೆ ಎಂದು ಅಮಿತ್ ಶಾ ಹೇಳಿದರು.