ರಾಜಕೀಯ ನಿವೃತ್ತಿ ಘೋಷಿಸಿದ ಸಚಿವ ಎಸ್.ಅಂಗಾರ
ಮಂಗಳೂರು; ಸಚಿವ ಎಸ್.ಅಂಗಾರ ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನಗೊಂಡಿದ್ದಾರೆ. ಅಲ್ಲದೆ ರಾಜಕೀಯದಿಂದ ನಿವೃತ್ತಿಯಾಗುತ್ತಿರುವುದಾಗಿಯೂ ಘೋಷಣೆ ಮಾಡಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಪಕ್ಷ ನನ್ನನ್ನು ನಡೆಸಿಕೊಂಡು ರೀತಿ ನನಗೆ ತುಂಬಾ ನೋವು ತಂದಿದೆ. ಹೀಗಾಗಿ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ನನಗೆ ಟಿಕೆಟ್ ತಪ್ಪಿರುವುದು ಪೂರ್ವ ಯೋಜಿತ ನಿರ್ಧಾರವಾಗಿದೆ. ಟಿಕೆಟ್‌ಗಾಗಿ ನಾನು ಯಾವುದೇ ಲಾಬಿ ಮಾಡಲಿಲ್ಲ ಎಂದಿರುವ ಅಂಗಾರ, ಇನ್ನು ನಾನು ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.