ಮೋದಿ ಹೆಸರಿನ ಬಗ್ಗೆ ಅವಹೇಳನ; ಜೈಲಿಗೆ ಹೋಗೋದ್ರಿಂದ ಪಾರಾದ ರಾಹುಲ್ ಗಾಂಧಿ
ಸೂರತ್; ಕಳ್ಳರೆಲ್ಲರಿಗೂ ಮೋದಿ ಎಂಬ ಉಪನಾಮ ಯಾಕಿರುತ್ತೆ ಎಂದು ಲೇವಡಿ ಮಾಡಿದ್ದ ರಾಹುಲ್ ಗಾಂಧಿ ಕಾನೂನು ಸಂಕಷ್ಟದಿಂದ ಕೊಂಚದರಲ್ಲಿ ಪಾರಾಗಿದ್ದಾರೆ. 2019ರಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದಿದ್ದ ರ್ಯಾಲಿಯಲ್ಲಿ ಪ್ರಧಾನಿ ಮೋದಿಯನ್ನು ಅವಹೇಳನ ಮಾಡಲು ಹೋಗಿ ವಿವಾದಕ್ಕೀಡಾಗಿದ್ದರು. ಗುಜರಾತ್ನ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ, ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಮೋದಿ ಉಪನಾಮವಿರುವವರನ್ನೆಲ್ಲಾ ಹೀಯಾಳಿಸಿದ್ದಾರೆ ಎಂದು ದೂರಲಾಗಿತ್ತು. ವಿಚಾರಣೆ ನಡೆಸಿದ ಸೂರತ್ ಕೋರ್ಟ್, ರಾಹುಲ್ ಗಾಂಧಿ ದೋಷಿ ಎಂದು ತೀರ್ಪು ನೀಡಿದೆ. ಅಲ್ಲದೆ ಎರಡು ವರ್ಷ ಜೈಲು ಶಿಕ್ಷೆಯನ್ನೂ ವಿಧಿಸಿದೆ. ಆದ್ರೆ ಈ ಬೆನ್ನಲ್ಲೇ ರಾಹುಲ್‌ಗೆ 30 ದಿನಗಳಿಗೆ ಜಾಮೀನು ಸಿಕ್ಕಿದ್ದು, ಜೈಲಿಗೆ ಹೋಗೋದ್ರಿಂದ ತಪ್ಪಿಸಿಕೊಂಡಿದ್ದಾರೆ.
2012ರಲ್ಲಿ ರಾಹುಲ್ ಗಾಂಧಿ ಸೂರತ್ ಕೋರ್ಟ್‌ಗೆ ಹಾಜರಾಗಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು. ಆದ್ರೆ ರಾಹುಲ್ ಗಾಂಧಿಯವರು ಮೋದಿ ಉಪನಾಮವಿರುವವರೆನ್ನೆಲ್ಲಾ ಅವಹೇಳನ ಮಾಡಿದ್ದಾರೆ ಎಂದು ಬಲವಾಗಿ ವಾದಿಸಲಾಗಿದ್ದು, ಕೋರ್ಟ್ ಅದನ್ನು ಮಾನ್ಯ ಮಾಡಿದೆ. ರಾಹುಲ್ ಮಾಡಿದ ಭಾಷಣ ತಪ್ಪು ಎಂದು ಹೇಳಿದೆ.