ಅರ್ಕಾವತಿ ಡಿನೋಟಿಫಿಕೆಶನ್ ಹಗರಣ ಲೋಕಾಯುಕ್ತ ತನಿಖೆಗೆ; ನಳೀನ್ ಕುಮಾರ್ ಕಟೀಲ್
ರಾಯಚೂರು; ಅರ್ಕಾವತಿ ಡಿನೋಟಿಫಿಕೆಶನ್ ಹಗರಣವನ್ನ ಲೋಕಾಯುಕ್ತ ತನಿಖೆಗೆ ವಹಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸೂಗೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆರ್ಕಾವತಿ ಡಿನೋಟಿಫಿಕೇಷನ್ ಹಗರಣ ಕುರಿತು ರಿಡೋ ವರದಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ್ದಾರೆ. ತನಿಖೆಯ ವರದಿಯಲ್ಲಿರುವ ಕೊನೆ ಸಾಲುಗಳನ್ನು ಸಿ ಎಂ ಸ್ಪಷ್ಟಪಡಿಸಿದ್ದಾರೆ. ಇದನ್ನು ಲೋಕಾಯುಕ್ತ ತನಿಖೆ ವಹಿಸಲಾಗುವುದು. ತನಿಖೆಯ ನಂತರ ಸತ್ಯಸತ್ಯಾತೆ ತಿಳಿಯಲಿದೆ. ವರದಿಯ ದಾಖಲೆಗಳೊಂದಿಗೆ ಆರೋಪ ಮಾಡಲಾಗಿದೆ ಎಂದರು.
ವಿಜಯಸಂಕಲ್ಪ ಯಾತ್ರೆ ಮುಕ್ತಾಯ: ಮಾ 1 ರಿಂದ ರಥಯಾತ್ರೆ.
ರಾಜ್ಯದಲ್ಲಿ ಹಮ್ಮಿಕೊಂಡಿದ್ದ ವಿಜಯಸಂಕಲ್ಪ ಯಾತ್ರೆ ಇಂದು ಮುಕ್ತಾಯವಾಗಲಿದೆ ಎಂದು ಎಂದು ನಳೀನ್ ಕುಮಾರ್ ಕಟೀಲ್ ತಿಳಿಸಿದರು.
ವಿಜಯ ಸಂಕಲ್ಪ ಯಾತ್ರೆ ಮಾಜಿ ಸಿ ಎಂ ಬಿ.ಎಸ್.ಯಡಿಯೂರಪ್ಪ,ನಳೀನ್ ಕುಮಾರ್ ಕಟೀಲ್, ಅರುಣ್‌ಸಿಂಗ್ ನೇತೃತ್ವದಲ್ಲಿ ಮೂರು ತಂಡಗಳಿಂದ ವಿಜಯಸಂಕಲ್ಪ ಯಾತ್ರೆ ನಡೆದಿದ್ದು,
ಯಾತ್ರೆ ಅಭೂತಪೂರ್ವವಾಗಿ ಯಶ್ವಸಿ ಕಂಡಿದೆ. ಈ ವೇಳೆ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ ಎಂದರು. ಮಾ.1 ರಿಂದ ರಾಜ್ಯದಲ್ಲಿ ಬಿಜೆಪಿಯ ರಥಯಾತ್ರೆಯನ್ನು ನಡೆಸಲಾಗುತ್ತದೆ. ನಾಲ್ಕು ವಿಭಾಗದಲ್ಲಿ, ಪ್ರತಿಯೊಂದು ಕ್ಷೇತ್ರದಲ್ಲಿ ರಥಯಾತ್ರೆ ನಡೆಯಲಿದೆ ಎಂದರು.
ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ನಾಲ್ಕು ಹಂತದ ರಾಜ್ಯ ಪ್ರವಾಸವನ್ನು ಮುಗಿಸಿದ್ದಾರೆ. 27ರಂದು ಶಿವಮೊಗ್ಗ ಹಾಗೂ ಬೆಳಗಾವಿಗೆ ಜಿಲ್ಲೆಗೆ ಐದನೇ ಹಂತದ ಪ್ರವಾಸದಲ್ಲಿ ಭಾಗವಹಿಸುತ್ತಿದ್ದು ರಾಜ್ಯ ಬಿಜೆಪಿ ಉತ್ಸಾಹ ತುಂಬಿದೆ ಎಂದರು.
ಅಭ್ಯರ್ಥಿ ಆಯ್ಕೆ ಕುರಿತು ಯಾವುದೇ ಗೊಂದಲ ಇಲ್ಲಾ…
ಬಿಜೆಪಿ ಅಭ್ಯರ್ಥಿಗಳು ಆಯ್ಕೆ ಮಾಡುವ ವಿಚಾರದಲ್ಲಿ ಯಾವುದೇ ಗಡಿಬಿಡಿಯಿಲ್ಲ. ಸೂಕ್ತವಾದ ಅಭ್ಯರ್ಥಿಗಳು ಪಟ್ಟಿಯನ್ನು ಸಿದ್ದಪಡಿಸಲಾಗುತ್ತೆ. ಇದಕ್ಕಾಗಿ ಸಮೀಕ್ಷೆಗಳು, ಸರ್ವೆಗಳು, ಅಧ್ಯಯನಗಳು ನಡೆಯುತ್ತಿವೆ.
ರಾಜ್ಯದಿಂದ ಗೆಲ್ಲುವ ಅಭ್ಯರ್ಥಿಗಳನ್ನು ಪಕ್ಷದ ಕೇಂದ್ರ ನಾಯಕರಿಗೆ ಹೆಸರನ್ನು ಶಿಫಾರಸ್ಸು ಮಾಡಲಾಗುವುದು. ಅಂತಿಮವಾಗಿ ಆಯ್ಕೆ ಸಮಿತಿ ತಿರ್ಮಾನವೇ ಅಂತಿಮ ಎಂದರು.