ಪುರುಷ ಐಎಎಸ್ ಅಧಿಕಾರಿಗಳು ಖಾಸಗಿ ಫೋಟೋಗಳು ಕಳುಹಿಸಿದ್ದರಂತೆ ರೋಹಿಣಿ..!
ಬೆಂಗಳೂರು; ಐಎಎಸ್ ಅಧಿಕಾರಿ ರೋಹಿಣಿ ಸಿಂದೂರಿ ವಿರುದ್ಧ ಐಪಿಎಸ್ ಅಧಿಕಾರಿ ಡಿ ರೂಪಾ ಅವರು ನಿನ್ನೆಯಷ್ಟೇ 19 ಪ್ರಶ್ನೆಗಳನ್ನು ಕೇಳಿದ್ದರು. ಇಂದು ಮತ್ತೆ ಕೆಲವ ಸ್ಫೋಟಕ ಫೋಟೋಗಳನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ರೋಹಿಣಿ ಸಿಂಧೂರಿ ಹಾಗೂ ಡಿ ರೂಪಾ ಅವರ ಕಿತ್ತಾಟ ಮುಂದುವರೆದಿದೆ.
ಫೇಸ್ ಬುಕ್ ನಲ್ಲಿ ಫೋಸ್ಟ್ ಹಾಕಿರುವ ರೂಪಾ ಅವರು ಮೂವರು ಪುರುಷ ಐಎಎಸ್ ಅಧಿಕಾರಿಗಳಿಗೆ ರೋಹಿಣಿಯವರು ತಮ್ಮ ಖಾಸಗಿ ಫೋಟೋಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಜೊತೆ ಕೆಲವೊಂದು ಫೋಟೋಗಳನ್ನು ಕೂಡಾ ಲಗತ್ತಿಸಿದ್ದಾರೆ.
ಈ ರೀತಿಯ ಫೋಟೋಗಳು ನಾರ್ಮಲ್ ಎನಿಸಬಹುದು. ಆದ್ರೆ, ಒಬ್ಬ ಮಹಿಳಾ ಅಧಿಕಾರಿ ಒಂದಲ್ಲ, ಎರಡಲ್ಲ ಮೂವರು ಐಎಎಸ್ ಅಧಿಕಾರಿಗಳಿಗೆ ಖಾಸಗಿ ಫೋಟೋಗಳನ್ನು ಕಳುಹಿಸುತ್ತಾರೆ ಅಂದ್ರೆ ಏನರ್ಥ..? ಇದು ಆಕೆಯ ಪ್ರೈವೇಟ್ ಮ್ಯಾಟರ್ ಆಗುವುದಿಲ್ಲ. ಐಎಎಸ್ ಸರ್ವೀಸ್ ಕಂಡಕ್ಟ್ ರೂಲ್ ಪ್ರಕಾರ ಇದು ಅಪರಾಧ ಎಂದು ರೂಪಾ ಹೇಳಿಕೊಂಡಿದ್ದಾರೆ.