ಮಾಯಾಂಗ್; ಬ್ಲ್ಯಾಕ್ ಮ್ಯಾಜಿಕ್ ಕ್ಯಾಪಿಟಲ್ ಆಫ್ ಇಂಡಿಯಾ..!
ಮಾಯಾಂಗ್; ಮಾಟ ಮಂತ್ರ ಅಂದಾಕ್ಷಣ ನಮಗೆ ನೆಪಾಗೋದು ಕೊಳ್ಳೇಗಾಲ… ಇದನ್ನ ಕರ್ನಾಟಕದ ಬ್ಲ್ಯಾಕ್ ಮ್ಯಾಜಿಕ್ ಕ್ಯಾಪಿಟಲ್ ಸಿಟಿ ಅಂದ್ರೂ ತಪ್ಪಾಗಲಾರದೇನೋ.. ಆದ್ರೆ ಇತ್ತೀಚಿಗೆ ಇಲ್ಲೂ ಮಾಟ ಮಂತ್ರದ ಚಟುವಟಿಕೆಗಳು ಕಡಿಮೆಯಾಗಿವೆ… ದೇಶ ಅಭಿವೃದ್ಧಿಯಾದಂತೆ ಇಂತಹ ಮೂಢನಂಬಿಕೆಗಳು ನಶಿಸುತ್ತಿವೆ.. ಆದ್ರೆ ಅಸ್ಸಾಂನ ಮಾಯಾಂಗ್ ಗ್ರಾಮ ಇದಕ್ಕೆ ಅಪವಾದ… ಯಾಕಂದ್ರೆ ಈಗ್ಲೂ ಈ ಗ್ರಾಮ ಬ್ಲ್ಯಾಕ್ ಮ್ಯಾಜಿಕ್ಗೆ ಕುಖ್ಯಾತಿ.. ಅದಕ್ಕೇ ಇದನ್ನ ಬ್ಲ್ಯಾಕ್ ಮ್ಯಾಜಿಕ್ ಕ್ಯಾಪಿಟಲ್ ಆಫ್ ಇಂಡಿಯಾ ಅಂತ ಕರೀತಾರೆ…
ಮಾಯಾಂಗ್… ಇದು ಅಸ್ಸಾಂ ರಾಜ್ಯದ ಮೋರಿಗಾಂವ್ ಜಿಲ್ಲೆಯಲ್ಲಿದೆ.. ಬ್ರಹ್ಮಪುತ್ರ ನದಿ ದಡದಲ್ಲಿರುವ ಈ ಪುಟ್ಟ ಗ್ರಾಮದಲ್ಲಿ ಹೆಚ್ಚಾಗಿ ವಿಲಕ್ಷಣ ಚಟುವಟಿಕೆಗಳೇ ನಡೆಯುತ್ವೆ… ಈ ಹಳ್ಳಿಗೆ ಭೇಟಿ ನೀಡೋರು ಮಾಟ ಮಂತ್ರ ಮಾಡಿಸುವ ಕಾರಣದಿಂದ ಅಷ್ಟೇ… ಯಾಕಂದ್ರೆ, ಈ ಪುಟ್ಟ ಹಳ್ಳಿಯಲ್ಲಿ ಪುಟ್ಟ ಮಕ್ಕಳಿಗೂ ಮಾಟಮಂತ್ರದ ಅರಿವಿರುತ್ತೆ…
ಹೌದು, ಈ ಮಾಯಾಂಗ್ ಗ್ರಾಮ ಒಂದು ವಿಲಕ್ಷಣವಾದ ಗ್ರಾಮ.. ದೆವ್ವ, ಭೂತದ ಪರಿಕಲ್ಪನೆವುಳ್ಳವರು ಮಾತ್ರ ಈ ಹಳ್ಳಿಯನ್ನ ಹುಡುಕ್ಕೊಂಡು ಬರ್ತಾರೆ… ಈ ಗ್ರಾಮದ ಮೂಲ ಹೆಸ್ರು ಮ್ಯೋಂಗ್ ಅಂತ.. ಮ್ಯೋಂಗ್ ಎಂಬ ಪದ ಸಂಸ್ಕೃತದ ಮಾಯಾ ಎಂಬುದರಿಂದ ಬಂದಿದೆ.. ಹೀಗಾಗೇ ಈ ಹಳ್ಳಿಯನ್ನೀಗ ಮಾಯಾಂಗ್ ಅಂತ ಕರೀತಾರೆ… ಕೆಲವರು ಈ ಪದ ಮಿಯಾಂಗ್ ಪದದಿಂದ ಬಂದಿದೆ ಅಂತಾರೆ.. ಇದರ ಅರ್ಥ ‘ಆನೆ’ ಅಂತೆ.. ಏನೇ ಆಗಲೂ ಈ ಗ್ರಾಮಕ್ಕೆ ಭೇಟಿ ಕೊಟ್ಟರೆ ಅಲ್ಲೊಂದು ಮಾಯಾಲೋಕವೇ ಅನಾವರಣವಾಗುತ್ತೆ…
ಮಾಯಾಂಗ್ ಗ್ರಾಮ ಅತ್ಯಂತ ಪುರಾತನ ಗ್ರಾಮ.. ಮಹಾಭಾರತದಲ್ಲೂ ಇದರ ಉಲ್ಲೇಖ ಇದೆ ಅಂದ್ರೆ ಇದರ ಪ್ರಾಮುಖ್ಯತೆ ನಿಮಗೇ ಅರ್ಥ ಆಗುತ್ತೆ… ಘಟೋತ್ಕಚನು ಮಾಯಾಂಗ್ನಿಂದ ಅನೇಕ ಮಾಂತ್ರಿಕ ವಿದ್ಯೆ ಮತ್ತು ಶಕ್ತಿಯನ್ನು ಪಡೆದು ಮಹಾಭಾರತ ಯುದ್ಧದಲ್ಲಿ ಪಾಲ್ಗೊಳ್ತಾನಂತೆ.. ಈಗಲೂ ಈ ಗ್ರಾಮಕ್ಕೆ ಅನೇಕ ಹಳೆಯ ಮಾಟಗಾರರು ಮತ್ತು ಮಾಟಗಾತಿಯರು ಬರುತ್ತಾರೆ..
ಈ ಗ್ರಾಮದ ಅರ್ಧಕ್ಕಿಂತ ಹೆಚ್ಚು ಜನ ಮಾಟ-ಮಂತ್ರದ ವಿದ್ಯೆಯಲ್ಲಿ ಪರಿಣಿತರು.. ಒಟ್ಟಿಗೆ ಸೇರಿ ಮಾಟ-ಮಂತ್ರಗಳನ್ನು ಅಭ್ಯಾಸ ಮಾಡುತ್ತಾರೆ.. ಇವರು ಹಸ್ತರೇಖೆಯನ್ನು ಭೂತ, ಭವಿಷ್ಯವನ್ನೆಲ್ಲಾ ಹೇಳುತ್ತಾರಂತೆ.. ಒಬ್ಬ ವ್ಯಕ್ತಿಯ ಭವಿಷ್ಯವನ್ನು ಒಡೆದ ಗಾಜಿನ ತುಂಡು ಮತ್ತು ಚಿಪ್ಪುಗಳ ಮೂಲಕ ಸವಿವರವಾಗಿ ಹೇಳುವ ಶಕ್ತಿ ಇವರಿಗಿದೆಯಂತೆ..ವ್ಯಕ್ತಿಯ ಕಾಯಿಲೆಗಳನ್ನು ಯಾವುದೇ ರೀತಿಯ ವೈದ್ಯಕೀಯ ಚಿಕಿತ್ಸೆ ಇಲ್ಲದೆ ತಮ್ಮ ಮಾಟಮಂತ್ರದಿಂದ ಗುಣಪಡಿಸುತ್ತಾರೆ ಅನ್ನೋ ನಂಬಿಕೆ ಕೂಡಾ ಇದೆ.. ಯಾವುದೇ ನೋವನ್ನು ಕ್ಷಣಾರ್ಧದಲ್ಲಿ ಒಂದು ತಾಮ್ರದ ತಗಡಿನ ಮೂಲಕ ನೋವು ನಿವಾರಿಸ್ತಾರಂತೆ ಇವ್ರು…
ಈ ಗ್ರಾಮವೀಗ ಪ್ರವಾಸಿ ತಾಣವಾಗು ಬದಲಾಗಿದೆ.. ಈಗ ಯಾರು ಬೇಕಾದರೂ ಈ ಗ್ರಾಮಕ್ಕೆ ಭೇಟಿ ನೀಡಬಹುದು.. ಇಲ್ಲಿನ ಮ್ಯೂಸಿಯಂನಲ್ಲಿರುವ ಮಾಟ-ಮಂತ್ರದ ಕುರಿತ ಪುಸ್ತಕಗಳನ್ನು ನೋಡಬಹುದು.. ಈ ವಿಲಕ್ಷಣ ಮಾಯಾಂಗ್ ಗ್ರಾಮ ಗುವಾಹಟಿಯಿಂದ 40 ಕಿಲೋ ಮೀಟರ್ ದೂರದಲ್ಲಿದೆ.