CrimeDistricts

ಮಹಿಳೆ ಮೇಲೆ ಅತ್ಯಾಚಾರ; ತಲೆ ಜಜ್ಜಿ ಭೀಕರ ಕೊಲೆ..!

ಚಿಕ್ಕಬಳ್ಳಾಪುರ; ಮಹಿಳೆಯೊಬ್ಬರನ್ನು ರಾಗಿ ಹೊಲಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ, ನಂತರ ಮುಖವನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದ ನಗರದ ಹೊರವಲಯದಲ್ಲಿ ನಡೆದಿದೆ. ಚಿತ್ರಾವತಿಯಲ್ಲಿರುವ ಸರ್ಕಾರಿ ಡಿಎಡ್‌ ಕಾಲೇಜು ಬಳಿ ರಾಗಿ ಹೊಲದಲ್ಲಿ ಈ ಕೃತ್ಯ ಎಸಗಲಾಗಿದೆ.

ಅರೆಬೆತ್ತಲೆಯಾಗಿ ಅಂಗಾತ ಮಲಗಿರುವ ಮಹಿಳೆಯ ಮೃತದೇಹ ರಾಗಿ ಹೊಲದಲ್ಲಿ ಸಿಕ್ಕಿದ್ದು, ಮುಖವನ್ನು ಕಲ್ಲಿನಿಂದ ಜಜ್ಜಲಾಗಿದೆ. ಮಹಿಳೆ ಯಾರೆಂಬ ಗುರುತು ಪತ್ತೆಯಾಗಿಲ್ಲ. ಮಹಿಳೆ 30 ವಯಸ್ಸಿನವರಾಗಿರಬಹುದೆಂದು ಅಂದಾಜಿಸಲಾಗಿದೆ. ವೇಶ್ಯಾವಾಟಿಕೆಗೆ ಕರೆತಂದು ಕೊಲೆ ಮಾಡಿರಬಹುದು ಎಂಬ ಅನುಮಾನ ಮೂಡಿದೆ. ಮಹಿಳೆ ಉತ್ತರ ಭಾರತ ಮೂಲದವಳಿರಬಹುದು ಎಂದು ಪೊಲೀಸರು ಹೇಳುತ್ತಿದ್ದಾರೆ.

ಸ್ಥಳಕ್ಕೆ ಡಿವೈಎಸ್‌ಪಿ ವಾಸುದೇವ್‌, ಸಿಪಿಐ ರಾಜು, ಎಸ್‌ಐ ಪ್ರದೀಪ್‌ ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Share Post