ಮಳಲಿ ಮಸೀದಿ ವಿವಾದ; ನವೆಂಬರ್ 9ಕ್ಕೆ ತೀರ್ಪು
ಮಂಗಳೂರು; ಮಳಲಿ ಮಸೀದಿಯಲ್ಲಿ ದೇವಾಲಯ ಮಾದರಿ ರಚನೆ ಇದೆ ಎಂಬ ವಾದ ಹಿನ್ನೆಲೆಯಲ್ಲಿ ಕೋರ್ಟ್ ಮೋರೆ ಹೋಗಲಾಗಿತ್ತು. ಇಂದು ಅಂತಿಮ ತೀರ್ಪು ನೀಡಬೇಕಿದ್ದ ಕೋರ್ಟ್ ನವೆಂಬರ್ ೯ಕ್ಕೆ ತೀರ್ಪು ಕಾಯ್ದಿರಿಸಿ ಆದೇಶ ನೀಡಿದೆ.
ಇಂದು ಮಂಗಳೂರಿನ ೩ನೇ ಹೆಚ್ಚುವರಿ ಕೋರ್ಟ್‌ನಲ್ಲಿ ಇಂದು ತೀರ್ಪು ನೀಡುವ ಸಾಧ್ಯತೆ ಇತ್ತು. ಆದ್ರೆ ವಾದ, ಪ್ರತಿವಾದ ಮುಗಿದ ನಂತರ ನ್ಯಾಯಾಧೀಶರು ತೀರ್ಪನ್ನು ಕಾಯ್ದಿರಿಸಿದ್ದಾರೆ. ಸದ್ಯದ ಮಟ್ಟಿಗೆ ಮಳಲಿ ಮಸೀದಿ ಕಟ್ಟಡವನ್ನು ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ನ್ಯಾಯಾಲಯ ಆದೇಶ ನೀಡಿದೆ.
ಮಳಲಿ ಮಸೀದಿಯನ್ನು ಹಿಂದೂ ದೇವಾಲಯ ಕೆಡವಿ ಕಟ್ಟಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.