ರಾಜ್ಯವನ್ನು ಕಪ್ಪ ಕೊಡೋ ಎಟಿಎಂ ಮಾಡಿದ್ದ ಕಾಂಗ್ರೆಸ್ಸಿಗರು; ಸಿಎಂ ಬೊಮ್ಮಾಯಿ
ಹೂವಿನಹಡಗಲಿ; ಕಾಂಗ್ರೆಸ್ ಸರ್ಕಾರವಿದ್ದಾಗ ಕರ್ನಾಟಕವನ್ನು ಕಪ್ಪ ಕೊಡೊ ಎಟಿಎಂ ಮಾಡಿಕೊಂಡಿದ್ದರು ಎಂದು ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಪಕ್ಷದ ವಿರುದ್ಧ ಲೇವಡಿ ಮಾಡಿದ್ದಾರೆ. ಹೂವಿನ ಹಡಗಲಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಕಾಂಗ್ರೆಸ್ ನಾಯಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಯಾವುದೇ ಚುನಾವಣೆ ನಡೆದರೂ ರಾಜ್ಯದಿಂದ ಹಣ ಹೋಗುತ್ತಿತ್ತು. ಕಾಂಗ್ರೆಸ್ ನಾಯಕರು ರಾಜ್ಯ ಲೂಟಿ ಹೊಡೆದಿದ್ದಾರೆ. ಹೈಕಮಾಂಡ್ಗೆ ಕಪ್ಪ ಕೊಡೊ ಪದ್ಧತಿ ನಮ್ಮಲ್ಲಿ ಇಲ್ಲ. ರಾಜ್ಯ ಲೂಟಿ ಮಾಡಿ ಹೈಕಮಾಂಡ್ಗೆ ದುಡ್ಡು ಕಳುಹಿಸುತ್ತಿದ್ದರು. ಡಿಕೆಶಿ ಕಪ್ಪ ಕಾಣಿಕೆ ಕೊಟ್ಟು ವಿಚಾರಣೆಗೆ ಹೋಗುತ್ತಿದ್ದಾರೆ ಎಂದು ಸಿಎಂ ಲೇವಡಿ ಮಾಡಿದ್ದಾರೆ. ಇನ್ನು ರಾಜ್ಯದಲ್ಲಿ ೫ ಲಕ್ಷ ಉದ್ಯೋಗ ಸೃಷ್ಟಿ ಮಾಡಲಾಗುತ್ತಿದೆ ಎಂದು ಇದೇ ವೇಳೆ ಸಿಎಂ ಹೇಳಿದರು.