ಹಿಜಾಬ್ ವಿವಾದದ ಹಿಂದೆ ಷಡ್ಯಂತ್ರವಿದೆ; ತುಚಾರ್ ಮೆಹ್ತಾ
ನವದೆಹಲಿ; ಹಿಜಾಬ್ ವಿವಾದದ ಹಿಂದೆ ದೊಡ್ಡ ಷಡ್ಯಂತ್ರವಿದ್ದು, ಪಿಎಫ್‌ಐ ಸಂಘಟನೆ ಕೂಡಾ ಇದರಲ್ಲಿ ಭಾಗಿಯಾಗಿದೆ ಎಂದು ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಆರೋಪಿಸಿದ್ದಾರೆ.
ಹಿಜಬ್ ನಿಷೇಧಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳ ವಿಚಾರಣೆ ವೇಳೆ ಮೆಹ್ತಾ ತಮ್ಮ ವಾದ ಮಂಡಿಸಿದರು. ಪ್ರತಿಭಟನೆ ಮಾಡುವ ಉದ್ದೇಶದಿಂದಲೇ ಹಿಜಾಬ್ ಹೋರಾಟವನ್ನು ರೂಪಿಸಲಾಯಿತು. ಯಾವುದೇ ಧರ್ಮದ ಆಚರಣೆ ಇದ್ದರೂ, ಅದರ ಅನುಸರಣೆ ಮತ್ತು ಆಚರಣೆ ಕಾನೂನಿನ ಮಿತಿಯಲ್ಲಿದೆ. ರಾಜ್ಯ ಸರ್ಕಾರದ ಅದೇಶ ನಿರ್ದಿಷ್ಟ ಸಮುದಾಯದ, ನಿರ್ದಿಷ್ಟ ಉಡುಪು ಧರಿಸಲು ನಿಯಂತ್ರಣ ಹೇರುವುದಿಲ್ಲ, ಬದಲಿಗೆ ಸಮವಸ್ತ್ರದ ಅಗತ್ಯದ ಬಗ್ಗೆ ಸ್ಪಷ್ಟವಾಗಿ ತಿಳಿಸಿದೆ. ಆದರೆ ಹಿಜಾಬ್ ಧರಿಸುವ ಹೋರಾಟದ ಹಿಂದೆ ವ್ಯವಸ್ಥಿತ ಪಿತೂರಿ ನಡೆದಿದೆ ಎಂದು ತುಷಾರ್ ಮೆಹ್ತಾ ತಿಳಿಸಿದರು.