CrimeDistricts

ತೊಂಡೆಹಳ್ಳದಲ್ಲಿ ದುರಂತ ಪ್ರಕರಣ; ಮತ್ತೊಬ್ಬ ಪೊಲೀಸ್‌ ಪೇದೆ ಮೃತದೇಹ ಪತ್ತೆ

ಕೊಪ್ಪಳ; ತೊಂಡೆಹಳ್ಳದಲ್ಲಿ ಕೊಚ್ಚಿಹೋಗಿದ್ದ ಮತ್ತೊಬ್ಬ ಪೊಲೀಸ್‌ ಪೇದೆಯ ಮೃತದೇಹವೂ ಪತ್ತೆಯಾಗಿದೆ. ಪೊಲೀಸ್‌ ಕಾನ್‌ಸ್ಟೆಬಲ್ ಮಹೇಶ ವಕ್ಕರದ (28) ಶವ ಇಂದು ಮಧ್ಯಾಹ್ನ ಪತ್ತೆಯಾಗಿದೆ. ನಿನ್ನೆ ಮುಂಡರಗಿ ಠಾಣೆ ಕಾನ್‌ಸ್ಟೆಬಲ್ ನಿಂಗಪ್ಪ ಹಲವಾಗಲಿ (28) ಅವರ ಶವ ಮಂಗಳವಾರ ಪತ್ತೆಯಾಗಿತ್ತು.

ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಬಂದೋಬಸ್ತ್‌ ಕರ್ತವ್ಯ ನಿರ್ವಹಿಸಿ ಮುಂಡರಗಿಗೆ ಹಿಂದಿರುಗುವಾಗ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನಲ್ಲಿ ಹರಿದಿರುವ ತೊಂಡೆಹಳ್ಳದಲ್ಲಿ ಇಬ್ಬರೂ ಕೊಚ್ಚಿಹೋಗಿದ್ದರು. ಮೂರು ದಿನಗಳಿಂದ ಮೃತದೇಹಗಳಿಗಾಗಿ ಹುಡುಕಾಟ ನಡೆಸಲಾಗುತ್ತಿತ್ತು. ಇಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ‌ತಂಡದ ಸದಸ್ಯರು ಕೂಡಾ ಕಾರ್ಯಾಚರಣೆಗೆ ಕೈಜೋಡಿಸಿದ್ದರು.

Share Post