BengaluruPolitics

ದೊಡ್ಡಬಳ್ಳಾಪುರದಲ್ಲಿ ನಡೆಯಬೇಕಿದ್ದ ಜನೋತ್ಸವ ಮತ್ತೆ ರದ್ದಾಗುವ ಸಾಧ್ಯತೆ

ಬೆಂಗಳೂರು; ಬಿಜೆಪಿ ಸರ್ಕಾರದ ಜನೋತ್ಸವಕ್ಕೆ ಇನ್ನೂ ಕಾಲ ಕೂಡಿಬಂದಿಲ್ಲ ಅಂತ ಕಾಣುತ್ತೆ. ಎರಡನೇ ಬಾರಿ ಕೂಡಾ ದೊಡ್ಡಬಳ್ಳಾಪುರದಲ್ಲಿ ನಡೆಯಬೇಕಿದ್ದ ಜನೋತ್ಸವ ರದ್ದಾಗುವ ಸಾಧ್ಯತೆ ಇದೆ. ನಾಳೆ ಜನೋತ್ಸವ ನಡೆಸಲು ಸಕಲ ಸಿದ್ಧತೆ ನಡೆದಿತ್ತು.  ಆದ್ರೆ, ಉಮೇಶ್‌ ಕತ್ತಿ ನಿಧನದ ಹಿನ್ನೆಲೆಯಲ್ಲಿ ಶಾಸಕರು, ಸಚಿವರು ಜನೋತ್ಸವವನ್ನು ಮುಂದೂಡಲು ಸಲಹೆ ನೀಡಿದ್ದಾರೆ. ಆದ್ರೆ ಸಿಎಂ ಬೊಮ್ಮಾಯಿ ಇನ್ನೂ ನಿರ್ಧಾರ ಪ್ರಕಟಿಸಿಲ್ಲ. ಸಿಎಂ ಬೊಮ್ಮಾಯಿ ನಿರ್ಧಾರದ ಮೇಲೆ ಜನೋತ್ಸವ ನಡೆಯುತ್ತಾ, ನಡೆಯೋಲ್ವಾ ಅನ್ನೋದು ತೀರ್ಮಾನವಾಗುತ್ತೆ. 

ಈ ಹಿಂದೆಯೂ ಇದೇ ದೊಡ್ಡ ಬಳ್ಳಾಪುರದಲ್ಲಿ ಜನೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದ್ರೆ ಅದರ ಹಿಂದಿನ ದಿನ ಬಿಜೆಯ ಯುವ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆಯಾಗಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧವೇ ಯುವ ಕಾರ್ಯಕರ್ತರು ರೊಚ್ಚಿಗೆದ್ದಿದ್ದರು. ಇದರಿಂದಾಗಿ ರಾತ್ರೋರಾತ್ರಿ ಜನೋತ್ಸವ ರದ್ದು ಮಾಡಿ ಸಿಎಂ ಬೊಮ್ಮಾಯಿ ತಮ್ಮ ನಿರ್ಧಾರ ಪ್ರಕಟಿಸಿದ್ದರು. ಇದೀಗ ಮತ್ತೆ ಜನೋತ್ಸವ ರದ್ದು ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕೆಲವೇ ಗಂಟೆಗಳಲ್ಲಿ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ತಿಳಿದುಬಂದಿದೆ.

Share Post