CrimeNational

ಶ್ರೀನಗರದ ಬಳಿ ಗ್ರೆನೇಡ್‌ ಎಸೆದೆ ಉಗ್ರರು; ಭದ್ರತಾ ಪಡೆ ಕಣ್ತಪ್ಪಿಸಿ ಪರಾರಿ

ಶ್ರೀನಗರ; ಭದ್ರತಾ ಪಡೆ ಕಾರ್ಯಾಚರಣೆ ವೇಳೆ ಉಗ್ರರು ಗ್ರೆನೇಡ್‌ ಎಸೆದು ಎಸ್ಕೇಪ್‌ ಆಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದಿದೆ. ಕಳೆದ ರಾತ್ರಿ ಕುತ್ಪೋರ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಈ ವೇಳೆ ಭದ್ರತಾ ಸಿಬ್ಬಂದಿಯಿಂದ ತಪ್ಪಿಸಿಕೊಳ್ಳಲು ಉಗ್ರರು ಗ್ರೆನೇಡ್‌ ದಾಳಿ ಮಾಡಿದ್ದಾರೆ.

ಉಗ್ರರು ಅಡಗಿದ್ದ ಪ್ರದೇಶವನ್ನು ಭದ್ರತಾ ಪಡೆ ಸುತ್ತವರೆದಿತ್ತು. ಇದೇ ವೇಳೆ ಉಗ್ರರು ಗ್ರೆನೇಡ್‌ ಎಸೆದಿದ್ದಾರೆ. ನಂತರ ಉಗ್ರರು ಕತ್ತಲೆಯಲ್ಲಿ ಮರೆಯಾಗಿದ್ದಾರೆ. ಇನ್ನು ಉಗ್ರರ ಅಡಗುತಾಣವನ್ನು ನಾಶಗೊಳಿಸಿರುವ ಭದ್ರತಾ ಪಡೆ, ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ.

Share Post