International

ವಧುವನ್ನು ಕರೆದೊಯ್ಯಲು ಮಿಲಿಟರಿ ಹೆಲಿಕಾಪ್ಟರ್‌ ಬಳಸಿದ ತಾಲಿಬಾನ್‌ ಕಮಾಂಡರ್‌

ಕಾಬೂಲ್; ಮದುವೆ ಮಂಟಪಕ್ಕೆ ಹೆಲಿಕಾಪ್ಟರ್‌ನಲ್ಲಿ ಎಂಟ್ರಿ ಕೊಡೋದು.. ಕದುರೆ ಮೇಲೆ ಹೋಗೋದು ಇತ್ತೀಚೆಗೆ ಗಮನ ಸೆಳೆಯುವ ಸನ್ನಿವೇಶಗಳು. ಅದೇ ತರಾ ಅಪಘಾನಿಸ್ತಾನದಲ್ಲಿ ವರನೊಬ್ಬ ವಧುವನ್ನು ವಿಶೇಷ ರೀತಿಯಲ್ಲಿ ಕರೆದುಕೊಂಡು ಹೋಗಿದ್ದಾನೆ. ತಾಲಿಬಾನ್‌ ಕಮಾಂಡರ್‌ ಆಗಿರುವ ವರ ತನ್ನನೂತನ ಪತ್ನಿಯನ್ನು ಮನೆಗೆ ಕರೆದೊಯ್ಯಲು ಮಿಲಿಟರಿ ಹೆಲಿಕಾಪ್ಟರ್‌ ಬಳಸಿದ್ದಾರೆ. 

 

ಮದುವೆ ಸಮಾರಂಭ ಮುಗಿದ ನಂತರ ಪತ್ನಿಯನ್ನು ಲೋಗರ್‌ನಿಂದ ಪೂರ್ವ ಅಫ್ಘಾನಿಸ್ತಾನದ ಕೋಸ್ಟ್ ಪ್ರಾಂತ್ಯಕ್ಕೆ ಮಿಲಿಟರಿ ಹೆಲಿಕಾಪ್ಟರ್‌ನಲ್ಲಿ ಕರೆದೊಯ್ದಿದ್ದ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ನವವಧುವನ್ನು ಹೆಲಿಕಾಪ್ಟರ್‌ನಲ್ಲಿ ಕರೆದೊಯ್ದ ವ್ಯಕ್ತಿ, ತಾಲಿಬಾನ್‌ನ ಹಕ್ಕಾನಿ ಶಾಖೆಯ ಕಮಾಂಡರ್ ಎಂದು ಗುರುತಿಸಲಾಗಿದೆ. ಕಮಾಂಡರ್‌ ಖೋಸ್ಟ್‌ನಲ್ಲಿ ನಿವಾಸಿಯಾಗಿದ್ದು, ನವವಧು ಮನೆ ಲೋಗರ್‌ನ ಬಾರ್ಕಿ ಬರಾಕ್ ಜಿಲ್ಲೆಯಲ್ಲಿದೆ.

ಆದರೆ ತಾಲಿಬಾನಿ ಕಮಾಂಡರ್‌ನಿಂದ ಮಿಲಿಟರಿ ಹೆಲಿಕಾಪ್ಟರ್‌ನ್ನು ವೈಯಕ್ತಿಕವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪವನ್ನು ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ ತಳ್ಳಿಹಾಕಿದೆ ಎಂದು ಅವರು ತಿಳಿಸಿದ್ದಾರೆ.

Share Post