Districts

ಸುಳ್ಯದಲ್ಲಿ ಮತ್ತೆ ಕಂಪಿಸಿತು ಭೂಮಿ; ಮಧ್ಯರಾತ್ರಿ ಭೀಕರ ಶಬ್ದ

ಸುಳ್ಯ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರದಲ್ಲಿ ನಾಲ್ಕನೇ ಬಾರಿ ಭೂಮಿ ಕಂಪಿಸಿದೆ. ಸುಳ್ಯ ತಾಲ್ಲೂಕಿನಲ್ಲಿ ಮೊನ್ನೆಯಷ್ಟೇ ಭೂಕಂಪನವಾಗಿತ್ತು. ಇದೀಗ ಮತ್ತೆ ಇಂದು ಮಧ್ಯರಾತ್ರಿ ಭೀಕರ ಶಬ್ದದೊಂದಿಗೆ ಭೂಮಿ ಸಣ್ಣ ಮಟ್ಟದಲ್ಲಿ ಕಂಪಿಸಿದೆ.

ಸಂಪಾಜೆ ಹಾಗು ಸಮೀಪದ ಪ್ರದೇಶ, ಸುಳ್ಯ ಪಟ್ಟಣದಲ್ಲಿ ರಾತ್ರಿ 1.15ರ ವೇಳೆಗೆ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದೆ. ಸುಳ್ಯ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಭೂ ಕಂಪನ ಆಗಿರುವ ಬಗ್ಗೆ ಜನರು ಆತಂಕ ವ್ಯಕ್ತಪಡಿಸಿದ್ದಾರೆ. ವಾರದಲ್ಲಿ ನಾಲ್ಕನೇ ಬಾರಿ ಭೂ ಕಂಪನ ಉಂಟಾಗಿದ್ದು, ಜನರ ಆತಂಕ ಹೆಚ್ಚಿದೆ. ಜೂ.25 ರಂದು ಬೆಳಿಗ್ಗೆ 9.10 ಕ್ಕೆ 2.3 ತೀವ್ರತೆಯ ಭೂ ಕಂಪನ ಆಗಿತ್ತು. ಜೂ.28 ರಂದು ಎರಡು ಬಾರಿ ಭೂಮಿ ನಲುಗಿತ್ತು. ಬೆಳಿಗ್ಗೆ ರಿಕ್ಟರ್ ಸ್ಕೇಲ್‌ನಲ್ಲಿ 3 ತೀವ್ರತೆಯ ಹಾಗು ಸಂಜೆ 1.8 ತೀವ್ರತೆಯ ಕಂಪನ ಉಂಟಾಗಿತ್ತು.

Share Post