National

ನನ್ನ ಜೊತೆ ಐವತ್ತು ಶಾಸಕರಿದ್ದಾರೆ; ಶೀಘ್ರದಲ್ಲೇ ಮುಂಬೈಗೆ ಬರ್ತೀನಿ – ಏಕನಾಥ್‌ ಶಿಂಧೆ

ಗುವಾಹಟಿ; ನನ್ನ ಜೊತೆ ಐವತ್ತು ಶಾಸಕರಿದ್ದಾರೆ, ಎಲ್ಲಾ ಶಾಸಕರನ್ನೂ ಶೀಘ್ರದಲ್ಲೇ ಮುಂಬೈಗೆ ಕರೆತರುತ್ತೇನೆ ಎಂದು ಏಕನಾಥ್‌ ಶಿಂಧೆ ಹೇಳಿದ್ದಾರೆ. ಗುವಾಹಟಿಯಲ್ಲಿ ಮಾತನಾಡಿದ ಅವರು, ನಮ್ಮೊಂದಿಗಿರುವ ಯಾವ ಶಾಸಕರು ಅವರ ಸಂಪರ್ಕದಲ್ಲಿದ್ದಾರೆಯೋ ಅಂಥವರ ಹೆಸರುಗಳನ್ನು ಬಹಿರಂಗಪಡಿಸಲಿ ಎಂದು ಶಿವಸೇನೆಗೆ ಸವಾಲು ಹಾಕಿದರು.

ಬಂಡಾಯ ಶಾಸಕರು ಶಿವಸೇನೆ ಹಾಗೂ ಬಾಳಾಸಾಹೇಬ ಠಾಕ್ರೆ ಅವರ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಎಲ್ಲ ಶಾಸಕರು ತಮ್ಮ ಮುಂದಿನ ದಾರಿ ಏನೆಂಬುದನ್ನು ಶೀಘ್ರದಲ್ಲೇ ಬಹಿರಂಗಪಡಿಸಲಿದ್ದಾರೆ ಎಂದು ಶಿಂಧೆ ಹೇಳಿದ್ದಾರೆ.

Share Post