National

ವಾಣಿಜ್ಯ ಬಳಕೆ ಸಿಲಿಂಡರ್‌ ಬೆಲೆ 135 ರೂ. ಕಡಿತ; ಅಡುಗೆ ಅನಿಲ ಯಥಾಸ್ಥಿತಿ

ನವದೆಹಲಿ; ಅಡುಗೆ ಅನಿಲದ ಜೊತೆಗೆ ವಾಣಿಜ್ಯ ಬಳಕೆ ಸಿಲಿಂಡರ್‌ ಬೆಲೆಯನ್ನೂ ಇತ್ತೀಚಿನ ದಿನಗಳಲ್ಲಿ ಭಾರಿ ಏರಿಕೆ ಮಾಡಲಾಗಿತ್ತು. ಇದೀಗ ವಾಣಿಜ್ಯ ಎಲ್‌ಪಿಜಿ ಬಳಕೆದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. 19 ಕೆಜಿ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್‌ ರಿಫಿಲ್‌ ಬೆಲೆಯಲ್ಲಿ 135 ರೂಪಾಯಿ ಇಳಿಕೆ ಮಾಡಲಾಗಿದೆ. ಆದ್ರೆ, ಅಡುಗೆ ಅನಿಲ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

   ದೆಹಲಿಯಲ್ಲಿ 2,322 ರೂ.ಗಳಷ್ಟಿದ್ದ ವಾಣಿಜ್ಯ ಬಳಕೆ ಸಿಲಿಂಡರ್ ಈಗ 2,219 ರೂಪಾಯಿ ಆಗಿದೆ. ಇದಕ್ಕೂ ಮುನ್ನ ಮೇ 1ರಂದು 19 ಕೆ.ಜಿ ಎಲ್‌ಪಿಜಿಯ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 102.50 ರೂ ಹೆಚ್ಚಿಸಲಾಗಿತ್ತು. ಈಗ ಮುಂಬೈನಲ್ಲಿ ವಾಣಿಜ್ಯ ಎಲ್​ಪಿಜಿ ಸಿಲಿಂಡರ್​ ಬೆಲೆ 2171.50, ಚೆನ್ನೈನಲ್ಲಿ 2,373 ರೂ.ಗೆ ಮಾರಾಟವಾಗುತ್ತಿದೆ.

Share Post