Cinema

ನಟಿ ನಿಕ್ಕಿ ಗಲ್ರಾನಿ – ತೆಲುಗು ನಟ ಆದಿ ಮದುವೆ ಸಂಭ್ರಮ; ಫೋಟೋಗಳು ವೈರಲ್‌

ಹೈದರಾಬಾದ್‌: ಬಹುಭಾಷಾ ನಟಿ ನಟಿ ನಿಕ್ಕಿ ಗಲ್ರಾನಿ ಅವರು ತೆಲುಗು ನಟ ಆದಿ ಪಿನಿಶೆಟ್ಟಿ ಅವರೊಂದಿಗೆ ನಿನ್ನೆ ಸಪ್ತಪದಿ ತುಳಿದಿದ್ದಾರೆ. ಚೆನ್ನೈನಲ್ಲಿ ನಡೆದ ಅದ್ದೂರಿ ಮದುವೆಯ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ತೆಲುಗು ನಟ ಆದಿ ಪಿನಿಶೆಟ್ಟಿ ಹಾಗೂ ನಟಿ ನಿಕ್ಕಿ ಗಲ್ರಾನಿ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಎರಡೂ ಮನೆಯವರಿಂದ ಒಪ್ಪಿಗೆಯೂ ಸಿಕ್ಕಿತ್ತು. ಹೀಗಾಗಿ 2022ರ ಮಾರ್ಚ್‌ 23ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಬುಧವಾರ, ಚೆನ್ನೈನಲ್ಲಿ ಖಾಸಗಿಯಾಗಿ ಮದುವೆ ಮಾಡಿಕೊಂಡಿದ್ದಾರೆ. ರೆ. ಈ ವಿವಾಹ ಕಾರ್ಯಕ್ರಮದಲ್ಲಿ ಎರಡೂ ಕುಟುಂಬಗಳ ಸದಸ್ಯರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರು. ಮೆಹಂದಿ ಹಾಗೂ ಮದುವೆ ಸಮಾರಂಭದ ಪೋಟೊಗಳು ನಿಕ್ಕಿ ಮತ್ತು ಆದಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊಗಳನ್ನು ಅಭಿಮಾನಿಗಳು ಶೇರ್‌ ಮಾಡುತ್ತಿದ್ದಾರೆ.

ಕನ್ನಡದ ಅಜಿತ್‌, ಓ ಪ್ರೇಮವೇ, ಜಂಬೂ ಸವಾರಿ, ಸಿದ್ಧಾರ್ಥ ಸಿನಿಮಾಗಳಲ್ಲಿ ನಿಕ್ಕಿ ಗಲ್ರಾನಿ ನಟಿಸಿದ್ದಾರೆ. ಸದ್ಯ ಅವರು ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಅವರು ಹೆಚ್ಚು ನಟಿಸುತ್ತಿದ್ದಾರೆ. ಆದಿ ಕೂಡ ತೆಲುಗು, ತಮಿಳಿನ ಮುಖ್ಯ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ತಮಿಳಿನ ಕೊಚಾಡಿಯನ್‌, ತೆಲುಗಿನ ರಂಗಸ್ಥಳಂ, ಗುಡ್ ಲಕ್ ಸಖಿ ಸಿನಿಮಾಗಳಲ್ಲಿ ನಟಿಸಿದ್ದಾರೆ.

Share Post