Bengaluru

ಸರ್ಕಾರ ಉರುಳಿದರೂ ಪರವಾಗಿಲ್ಲ, ಕಿಂಗ್‌ಪಿನ್‌ ಹೆಸರು ಹೇಳಿ; ಹೆಚ್ಡಿಕೆಗೆ ಆರಗ ಸವಾಲು

ಕಲಬುರಗಿ: ರಾಜ್ಯ ಸರ್ಕಾರ ಉರುಳಿದರೂ ಪರವಾಗಿಲ್ಲ. ನಾವು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ನೀವು ಹೇಳಿದಂತೆ ನಿಮಗೆ ಗೊತ್ತಿದ್ದರೆ, ಪಿಎಸ್‌ಐ ಹಗರಣದ ಕಿಂಗ್‌ಪಿನ್‌ ಯಾರು ಅಂತ ಹೇಳಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿಯವರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಸವಾಲು ಹಾಕಿದ್ದಾರೆ. 

ಕಿಂಗ್‌ ಪಿನ್‌ ಯಾರು ಅನ್ನೋದು ಗೊತ್ತಿದೆ. ಆ ಹೆಸರು ಹೇಳಿದರೆ ಸರ್ಕಾರ ಬಿದ್ದುಹೋಗುತ್ತದೆ ಎಂದು ಹೆಚ್.ಡಿ,ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಆರಗ ಜ್ಞಾನೆಂದ್ರ ಅವರು, ಕುಮಾರ ಸ್ವಾಮಿ ಅವರು ಬರೀ ಹಿಟ್ ಅಂಡ್​ ರನ್‌ ಮಾಡಬಾರದು. ಕಿಂಗ್ ಪಿನ್ ಯಾರು ಅಂತ ಬಹಿರಂಗಪಡಿಸಲಿ. ದಾಖಲೆಗಳು ಇದರೆ ನಮಗೆ ಕೊಡಲಿ,‌ ನಾವು ತನಿಖೆ ನಡೆಸುತ್ತೆವೆ. ಇದರಿಂದ ಸರ್ಕಾರ ಬಿದ್ದರೂ ಸಹ ಪರವಾಗಿಲ್ಲ. ಆರೋಪಿ ವಿರುದ್ಧ ಕ್ರಮ ಜರುಗಿಸಲು ನಾವು ಸಿದ್ಧವಿದ್ದೇವೆ ಎಂದು ಹೇಳಿದರು.

Share Post