National

ಬಾಲಿವುಡ್‌ ನಟಿ ಸೋನಂ ಕಪೂರ್‌ ಮನೆಯಲ್ಲಿ ಕಳ್ಳತನ

ನವದೆಹಲಿ: ಬಾಲಿವುಡ್‌ ನಟಿ ಸೋನಂ ಕಪೂರ್‌ ಅವರ ದೆಹಲಿ ನಿವಾಸದಲ್ಲಿ ಕಳ್ಳತನ ನಡೆದಿರುವ ಬಗ್ಗೆ ತಡವಾಗಿ ವರದಿಯಾಗಿದೆ. ದೆಹಲಿಯ ಅಮೃತ್‌ ಶೇರ್ಗಿಲ್‌ ಮಾರ್ಗದಲ್ಲಿರುವ ಮನೆಯಲ್ಲಿ 1.41 ಕೋಟಿ ರೂಪಾಯಿ ಮೌಲ್ಯದ ನಗದು ಹಾಗೂ ಚಿನ್ನಾಭರಣ ಕಳುವಾಗಿದೆ. ಈ ಬಗ್ಗ ಸೋನಂ ಕಪೂರ್‌ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮನೆಯಲ್ಲಿನ 24 ಕಾರ್ಮಿಕರನ್ನು ವಿಚಾರಣೆ ನಡೆಸಿದ್ದಾರೆ. ಮನೆಗೆ ವಿಧಿ ವಿಜ್ಞಾನ ಪ್ರಯೋಗಾಲಯ ತಂಡ ಕೂಡ ಭೇಟಿ ನೀಡಿದೆ ಎಂದು ತಿಳಿದು ಬಂದಿದೆ.

ಸೋನಂ ಕಪೂರ್ ಮನೆಯಲ್ಲಿ ಅವರ ಅತ್ತೆ, ಮಾವ, ಗಂಡನ ಅಜ್ಜಿ ವಾಸಿಸುತ್ತಿದ್ದಾರೆ. ಈ ಕಳ್ಳತನ ಫೆಬ್ರವರಿಯಲ್ಲಿಯೇ ನಡೆದಿದೆ. ಫೆ.27 ರಂದು ದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ.

Share Post