ಪಾಕಿಸ್ತಾನ ಸಂಸತ್ ವಿಸರ್ಜನೆ; 3 ತಿಂಗಳಲ್ಲಿ ಚುನಾವಣೆಗೆ ಆದೇಶ
ಇಸ್ಲಾಮಾಬಾದ್: ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಯನ್ನು ಪಾಕಿಸ್ತಾನ ಸಂಸತ್ನ ಉಪಸಭಾಪತಿ ತಿರಸ್ಕರಿದ ಬೆನ್ನಲ್ಲೇ, ಪಾಕಿಸ್ತಾನ ಸರ್ಕಾರವನ್ನು ವಿಸರ್ಜಿಸಿ ಆದೇಶ ಹೊರಡಿಸಲಾಗಿದೆ. ಪಾಕಿಸ್ತಾನದ ಅಧ್ಯಕ್ಷ ಆರೀಫ್ ಅಲ್ವಿ, ಪಾಕಿಸ್ತಾನ ಸಂಸತ್ನ್ನು ವಿಸರ್ಜನೆ ಮಾಡಿದ್ದಾರೆ. ಜೊತೆಗೆ ಮೂರು ತಿಂಗಳಲ್ಲಿ ಚುನಾವಣೆ ನಡೆಸುವಂತೆ ಸೂಚನೆ ನೀಡಿದ್ದಾರೆ.
ಸಂಸತ್ ವಿಸರ್ಜನೆ ಮಾಡಿದ್ದರೂ, ಚುನಾವಣೆ ನಡೆಯುವವರೆಗೂ ಇಮ್ರಾನ್ ಖಾನ್ ಅವರೇ ಪ್ರಧಾನಿಯಾಗಿ ಮುಂದುವರೆಯಲಿದ್ದಾರೆ. ಈ ನಡುವೆ ಮಾತನಾಡಿರುವ ಇಮ್ರಾನ್ ಖಾನ್, ಚುನಾವಣೆಗೆ ಅಣಿಯಾಗುವಂತೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ಹಾಗೂ ಪಾಕ್ ದೇಶದ ಜನರಿಗೆ ಕರೆ ನೀಡಿದ್ದಾರೆ.