National

ಹಿಜಾಬ್‌ ಪರ ಧ್ವನಿ ಎತ್ತಿದ ಭುವನ ಸುಂದರಿ ಹರ್ನಾಜ್‌ ಸಂಧು

ಹಿಜಾಬ್​ ಧರಿಸುವುದು ಮಹಿಳೆಯರ ಹಕ್ಕು ಎಂದು ಭುವನ ಸುಂದರಿ ಹರ್ನಾಜ್​ ಸಂಧು ಹೇಳಿದ್ದಾರೆ. ಹಿಜಾಬ್‌ ವಿಚಾರದಲ್ಲಿ ಹೇರಿಕೆ ಸಲ್ಲದು ಎಂದಿರುವ ಅವರು, ಮಹಿಳೆಯರು ತಮ್ಮ ಇಷ್ಟದ ಜೀವನವನ್ನು ನಡೆಸಲು ಬಿಡಿ. ಅವರು ಹಾಕುವ ಬಟ್ಟೆಯ ಮೇಲೆ ಅವರನ್ನು ಅಳೆಯಬೇಡಿ ಎಂದು ಮನವಿ ಮಾಡಿದ್ದಾರೆ.

     ಮಧ್ಯಪ್ರದೇಶದ ಶಾಲೆಯೊಂದರಲ್ಲಿ ವಿದ್ಯಾರ್ಥಿಯೊಬ್ಬಳು ಹಿಜಾಬ್​ ಧರಿಸಿ ನಮಾಜ್​ ಮಾಡುತ್ತಿದ್ದ ವಿಡಿಯೋವೊಂದು ವೈರಲ್​ ಆಗಿತ್ತು. ಇದನ್ನೇ ಆಧಾರವಾಗಿಟ್ಟುಕೊಂಡು ಕಾರ್ಯಕ್ರಮವೊಂದರಲ್ಲಿ ಪತ್ರಕರ್ತರೊಬ್ಬರು ಹರ್ನಾಜ್‌ಗೆ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ಅವರು,    ಹಿಜಾಬ್​ ಧರಿಸಿದರೆ ಅವರನ್ನು ಯಾಕೆ ಟಾರ್ಗೆಟ್​ ಮಾಡ್ತೀರಾ? ಎಂದು ಪ್ರಶ್ನೆ ಮಾಡಿದರು.

Share Post