ನಮ್ಮನ್ನ ಕಂಡರೆ ಆಗದವರು ನಮ್ಮ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ-ಚಿಕ್ಕಹನುಮಯ್ಯ ಸಹೋದರ
ಬೆಂಗಳೂರು: ಬೆಳಗ್ಗೆಯಿಂದ ಎಸಿಬಿ ಅಧಿಕಾರಿಗಳು ಭ್ರಷ್ಟಾಚಾರಿಗಳ ಬೆವರಿಳಿಸುತ್ತಿದ್ದಾರೆ. ನಗರದ ಒಂಭತ್ತು ಕಡೆಗಳಲ್ಲಿ ಎಸಿಬಿ ದಾಳಿ ನಡೆಸಿದೆ ಅದರಲ್ಲಿ ಮುದ್ದಿನಪಾಳ್ಯದ ಚಿಕ್ಕಹನುಮಯ್ಯ ನಿವಾಸದಲ್ಲಿ ಅಧಿಕಾರಿಗಳು ಶೋಧಕಾರ್ಯ ನಡೆಸಿದ್ದಾರೆ. ಈ ಬಗ್ಗೆ ಚಿಕ್ಕಹನುಮಯ್ಯ ಸಹೋದರರು ಹೇಳೋದೆ ಬೇರೆ..
ನಮ್ಮ ಬಗ್ಗೆ ಯಾರೋ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆ. ನಮ್ಮನ್ನು ಕಂಡರೆ ಆಗವದವರು ಇಂತಹ ಕೃತ್ಯ ಎಸಗಿದ್ದಾರೆ ಎಂದು ಚಿಕ್ಕಹನುಮಯ್ಯ ಸಹೋದರ ಮಂಜುನಾಥ್ ಹೇಳಿಕೆ ನೀಡಿದ್ದಾರೆ. ಎಸಿಬಿ ದಾಳಿ ವೇಳೆ ನಮ್ಮ ಮನೆಯಲ್ಲಿ ಕೇವಲ 18ಸಾವಿರ ನಗದು ಪತ್ತೆಯಾಗಿದ ಅಷ್ಟೇ…ಎರಡು ಚಿನ್ನದ ಮಾಂಗಲಿ ಸರ, ಬೆಳ್ಳಿ ವಸ್ತುಗಳು ಮಾತ್ರ ಸಿಕ್ಕಿವೆ.
ಇನ್ನು ನಮ್ಮ ಜಮೀನಿಗೆ ಸಂಭಂಧಿಸಿದಂತೆ ನಮ್ಮ ಜಮೀನು ವಿಶ್ವೇಶ್ವರಯ್ಯ ಬಡಾವಣೆಗೆ ಸೇರಿದೆ ಅದಕ್ಕೆ ಪರಿಹಾರವಾಗಿ ನಮಗೆ ಸೈಟ್‌ಗಳನ್ನು ನೀಡಿದ್ದಾರೆ. ಅವರು ನೀಡಿರುವ ಸೈಟ್‌ಗಳಿಗೆ ಸಂಬಂಧಿಸಿದ ದಾಖಲೆಗಳು ಅಧಿಕಾರಿಗಳಿಗೆ ಸಿಕ್ಕಿವೆ. ಆದಾಯ ತೆರಿಗೆ ಬಗ್ಗೆ ಅಧಿಕಾರಿಗಳಿಗೆ ಬೇಕಾದ ಮಾಹಿತಿ ನಮ್ಮ ಆಡಿಟರ್ ಕಡೆಯಿಂದ ನೀಡಿದ್ದೇನೆ. ಅಧಿಕಾರಿಗಳಿಗೆ ನಾವು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದ್ದೇವೆ ಎಂದು ಮಧ್ಯವರ್ತಿ ಚಿಕಹನುಮಯ್ಯ ಸಹೋದರ ಮಂಜುನಾಥ್ ಹೇಳಿದ್ದಾರೆ.