Bengaluru

ಗಂಡನಿಗೆ ಬೇರೆ ಯುವತಿಯರ ಜೊತೆ ಸಂಬಂಧ ಆರೋಪ; ಮಹಿಳೆ ಆತ್ಮಹತ್ಯೆ

ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ಗಂಡನಿಗೆ ಬೇರೆ ಯುವತಿಯರ ಜೊತೆ ಸಂಬಂಧ ಇದೆ ಎಂದು ಮನನೊಂದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಗಾಯಿತ್ರಿನಗರದಲ್ಲಿ ನಡೆದಿದೆ. ೨೮ ವರ್ಷದ ಇಂದುಶ್ರೀ ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದು, ಆತ್ಮಹತ್ಯೆಗೂ ಮುನ್ನಡೆತ್‌ನೋಟ್‌ ಬರೆದಿಟ್ಟಿದ್ದಾರೆ.

    ರಾಕೇಶ್‌ ಎಂಬಾತನನ್ನು ಇಂದುಶ್ರೀ ಎರಡು ವರ್ಷಗಳಿಂದ  ಪ್ರೀತಿಸುತ್ತಿದ್ದು, 9 ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಆದ್ರೆ ಮದುವೆಯಾದ ಮೇಲೆ ರಾಕೇಶ್‌ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಇತರ ಯುವತಿಯರ ಜೊತೆಗೂ ಆತನಿಗೆ ಸಂಬಂಧವಿದೆ ಎಂದು ಇಂದುಶ್ರೀ ಆರೋಪಿಸಿದ್ದಾರೆ. ಇದೇ ಕಾರಣಕ್ಕೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಡೆತ್‌ನೋಟ್‌ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ. ಇಂದುಶ್ರೀ ತಂದೆಯ ದೂರಿನನ್ವಯ ಸುಬ್ರಹ್ಮಣ್ಯನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

Share Post