ಭದ್ರತೆ ಒದಗಿಸುತ್ತೇವೆ ರಾಯಭಾರಿ ಕಚೇರಿ ತೆರೆಯಿರಿ: ಭಾರತಕ್ಕೆ ತಾಲಿಬಾನ್ ಮನವಿ
ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನ್ ನಾಯಕರು ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸಲು ಮತ್ತು ರಾಜತಾಂತ್ರಿಕತೆಯಲ್ಲಿ ತಾಲಿಬಾನ್ ಉಪಸ್ಥಿತಿಯನ್ನು ಗುರುತಿಸಲು ದೇಶದಲ್ಲಿ ತನ್ನ ರಾಯಭಾರ ಕಚೇರಿಯನ್ನು ಪುನಃ ತೆರೆಯುವಂತೆ ಭಾರತಕ್ಕೆ ಮನವಿ ಮಾಡಿದ್ದಾರೆ. ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಭಾರತೀಯ ರಾಯಭಾರಿ ಕಚೇರಿಯನ್ನು ಪುನರಾರಂಭಿಸಿದರೆ ಭದ್ರತೆ ನೀಡಲು ಸಿದ್ಧ ಎಂದು ತಾಲಿಬಾನ್ ನಾಯಕರು ಭಾರತಕ್ಕೆ ತಿಳಿಸಿದ್ದಾರೆ ಎಂದು ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ. ತಾಲಿಬಾನ್ ಯುಎನ್ ರಾಯಭಾರಿ ಸುಹೇಲ್ ಶಾಹೀನ್ ಅಫ್ಘಾನಿಸ್ತಾನದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಮಾನವೀಯ ನೆರವಿನ ಅಡಿಯಲ್ಲಿ ಭಾರತ ತಾಲಿಬಾನ್‌ಗೆ ಕಳುಹಿಸಲಾದ 50,000 ಮೆಟ್ರಿಕ್ ಟನ್ ಗೋಧಿಯನ್ನು ಸ್ವೀಕರಿಸಿದೆ ಮತ್ತು ಭಾರತಕ್ಕೆ ಧನ್ಯವಾದ ತಿಳಿಸಿದೆ ಬೆನ್ನಲ್ಲೇ ಈ ಪ್ರಕಟಣೆ ಬಂದಿದೆ. ಆಹಾರ ಬಿಕ್ಕಟ್ಟಿನಲ್ಲಿ ಸಿಲುಕಿರುವ ಅಫ್ಘಾನಿಸ್ತಾನಕ್ಕೆ ನೆರವು ನೀಡಲು ಭಾರತ ಮುಂದಾಗಿದೆ. ಅದರ ಭಾಗವಾಗಿ, ಭಾರತವು ಅಂತಿಮವಾಗಿ 50,000 ಟನ್ ಗೋಧಿಯನ್ನು ತಾಲಿಬಾನ್‌ಗೆ ತಲುಪಿಸಿತು.
ಅದೇ ಸಮಯದಲ್ಲಿ ಪಾಕಿಸ್ತಾನವು ಕೂಡಾ ತಾಲಿಬಾನ್‌ಗಳಿಗೆ ಗೋಧಿಯನ್ನು ಕಳುಹಿಸಿತ್ತು. ಪಾಕಿಸ್ತಾನ ಕಳುಹಿಸಿದ ಗೋಧಿಯ ಬಗ್ಗೆ ದೂರು ನೀಡಿದ್ದಕ್ಕಾಗಿ ತಾಲಿಬಾನ್ ನಾಯಕರು ಪಾಕಿಸ್ತಾನ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಕಳಿಸಿದ ಗೋಧಿ ಸಂಪೂರ್ಣ ಹಾಳಾಗಿತ್ತು ಎಂದು ತಾಲಿಬಾನ್ ನಾಯಕರು ಆರೋಪ ಮಾಡಿದ್ರು. ಅದೇ ಸಮಯದಲ್ಲಿ, ತಾಲಿಬಾನ್ ಭಾರತ ಒದಗಿಸಿದ ಗೋಧಿಯು ಹೆಚ್ಚಿನ ಮೌಲ್ಯವನ್ನು ಹೊಂದಿದೆ ಮತ್ತು ಪಾಕಿಸ್ತಾನವು ಒದಗಿಸುವುದಕ್ಕಿಂತ ಭಾರತದ ಸಹಾಯವು ತುಂಬಾ ದೊಡ್ಡದಾಗಿದೆ ಎಂದು ಹೇಳಿಕೊಂಡಿದೆ. ಗೋಧಿ ಪೂರೈಕೆಯ ಸಮಯದಲ್ಲಿ ಅಟ್ಟಾರಿ-ವಾಘಾ ಗಡಿಯಲ್ಲಿ ಸಾರಿಗೆ ವಾಹನಗಳನ್ನು ನಿಲ್ಲಿಸುವ ಮೂಲಕ ದೇಶಕ್ಕೆ ಹರಿಯುವ ಮಾನವೀಯ ನೆರವನ್ನು ನಿಲ್ಲಿಸಿದ್ದಕ್ಕಾಗಿ ತಾಲಿಬಾನ್ ಪಾಕಿಸ್ತಾನದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಇದೀಗ ಕಾಬೂಲ್‌ನಲ್ಲಿ ಭಾರತ ತನ್ನ ರಾಯಭಾರ ಕಚೇರಿ ತೆರೆಯುವಂತೆ ತಾಲಿವಾನ್ ನಾಯಕರು ಮನವಿ ಮಾಡಿಕೊಂಡಿದ್ದಾರೆ.