National

ಒಂದು ವರ್ಷದಲ್ಲಿ 175ಉಗ್ರರನ್ನು ಸದೆಬಡಿದ ಸಿಆರ್‌ಪಿಎಫ್‌ ಯೋಧರು: 183ಉಗ್ರರ ಸೆರೆ

ಜಮ್ಮಕಾಶ್ಮೀರ:  ಜಮ್ಮು ಮತ್ತು ಕಾಶ್ಮೀರದಲ್ಲಿ ಅಂದರೆ, ಭಾರತೀಯ ಸೇನೆಯು ಭಯೋತ್ಪಾದಕರನ್ನು ಸದೆಬಡಿಯುವುದೇ ನೆನಪಾಗುತ್ತದೆ. ಭಾರತೀಯ ಸೈನಿಕರು ಭಯೋತ್ಪಾದಕರನ್ನು ಕೊಂದದ್ದನ್ನು ನಾವು ಆಗಾಗ್ಗೆ ಕೇಳುತ್ತೇವೆ. ಭಯೋತ್ಪಾದಕರಿಂದ ಭಾರತೀಯ ಸೈನಿಕರು ಹತರಾದ ಬಗ್ಗೆಯೂ ಕೇಳಿದ್ದೇವೆ. ಹೀಗೆ ಭಾರತಕ್ಕಾಗಿ ಪ್ರಾಣ ತ್ಯಾಗ ಮಾಡುತ್ತಿರುವ ಭಾರತೀಯ ಸೈನಿಕರು ಜಮ್ಮು-ಕಾಶ್ಮೀರದಲ್ಲಿ ದೇಶದ ಗಡಿಯನ್ನು ಎಡೆಬಿಡದೆ ಕಾವಲು ಕಾಯುತ್ತಿದ್ದಾರೆ. ಆಗಾಗ ಗುಂಡಿನ ದಾಳಿ ನಡೆಯುವುದು ಅಲ್ಲಿ ಸರ್ವೆ ಸಾಮಾನ್ಯ.

ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದು ವರ್ಷದೊಳಗೆ 175 ಉಗ್ರರನ್ನು ಹತ್ಯೆ ಮಾಡಿದೆ. ಇನ್ನೂ 183 ಉಗ್ರರನ್ನು ಜೀವಂತವಾಗಿ ಸೆರೆಹಿಡಿಯಲಾಗಿದೆ ಎಂದು CRPF ಡೈರೆಕ್ಟರ್ ಜನರಲ್ ಕುಲದೀಪ್ ಸಿಂಗ್ ಅವರು ಜಮ್ಮು ಮತ್ತು ಕಾಶ್ಮೀರ ಮತ್ತು ಇತರೆಡೆಗಳ ಚಟುವಟಿಕೆಗಳ ಬಗ್ಗೆ  ವಿವರಿಸಿದರು. ಮಾರ್ಚ್ 1, 2021, ಇಂದ ಮಾರ್ಚ್ 16, 2022  ರವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸಿಆರ್‌ಪಿಎಫ್ 175 ಉಗ್ರರನ್ನು ಹತ್ಯೆ ಮಾಡಿದೆ ಎಂದು ಫೋರ್ಸ್ ಡೈರೆಕ್ಟರ್ ಜನರಲ್ ಕುಲದೀಪ್ ಸಿಂಗ್ ಗುರುವಾರ (ಮಾರ್ಚ್ 17, 2022) ತಿಳಿಸಿದ್ದಾರೆ.

ಅದೇ ಸಮಯದಲ್ಲಿ, ನಕ್ಸಲೈಟ್ಸ್ ಪೀಡಿತ ರಾಜ್ಯಗಳಲ್ಲಿ 19 ನಕ್ಸಲೈಟ್ಸ್‌ಗಳನ್ನು ಕೊಲ್ಲಲಾಗಿದೆ ಮತ್ತು 699 ಮಂದಿಯನ್ನು ಬಂಧಿಸಲಾಗಿದೆ ಎಂದು ಸಿಆರ್‌ಪಿಎಫ್ ಹೇಳಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಸ್ತುತ ಪರಿಸ್ಥಿತಿ ಚೆನ್ನಾಗಿದೆ ಎಂದು ಹೇಳಿದ್ದಾರೆ. 370ನೇ ವಿಧಿ ರದ್ದತಿಯ ನಂತರ ಕಲ್ಲು ತೂರಾಟದ ಘಟನೆಗಳು ಹೆಚ್ಚಾಗಿ ನಡೆದಿವೆ. ಅಲ್ಲದೆ ವಿದೇಶಿ ಭಯೋತ್ಪಾದಕರ ದಾಳಿ ಕಡಿಮೆಯಾಗಿದೆ ಎಂದು ವಿವರಿಸಿದರು.

Share Post