ಅಧಿಕ ಉಪ್ಪು ಸೇವನೆ ಮಧುಮೇಹಕ್ಕೆ ಕಾರಣ-ಸಂಶೋಧನೆಯಲ್ಲಿ ಬಹಿರಂಗ
ಉಪ್ಪುಗಿಂತ ರುಚಿ ಬೇರೆ ಇಲ್ಲ ಎಂಬ ಗಾದೆಯೇ ಇದೆ ಆದರೆ ಅದೇ ಉಪ್ಪು ಅತಿಯಾದರೆ ನಮ್ಮ ಮರಣವೂ ಹತ್ತಿರದಲ್ಲೇ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಹೆಚ್ಚಿನ ಜನ ಕಡಿಮೆ ಉಪ್ಪಿರುವ ತಿಂಡಿಗಳನ್ನು ಇಷ್ಟಪಡುವುದಿಲ್ಲ. ಮಿತಿಮೀರಿದ ಉಪ್ಪು ಸೇವನೆಯು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು ಎಂದು ವೈದ್ಯರು ಈಗಾಗಲೇ ತೋರಿಸಿದ್ದಾರೆ. ಇದೀಗ ಉಪ್ಪಿನ ಹೆಚ್ಚಿನ ಸೇವನೆಯಿಂದ ಮಧುಮೇಹಕ್ಕೂ ಕೂಡ ಕಾರಣವಾಗಬಹುದು ಎಂದು ಸಂಶೋಧಕರು ಹೇಳುತ್ತಾರೆ.
ಸ್ಟಾಕ್ಹೋಮ್ನಲ್ಲಿರುವ ಕ್ಯಾರೊಲಿನಾಸ್ಕಾ ಇನ್ಸ್ಟಿಟ್ಯೂಟ್ ನಡೆಸಿದ ಅಧ್ಯಯನವು ದಿನಕ್ಕೆ ಎರಡು ಚಮಚಗಳಷ್ಟು ಉಪ್ಪಿ ಸೇವಿಸುವ ಜನರು ಮಧುಮೇಹಕ್ಕೆ ಒಳಗಾಗುವ ಎಲ್ಲಾ ಸಾಧ್ಯತೆಗಳಿವೆ ಎಂಬುದನ್ನು ಸಂಶೋಧನೆ ಮೂಲಕ ಕಂಡು ಹಿಡಿದಿದ್ದಾರೆ. ಸಕ್ಕರೆ ಅಂಶವಿರುವ ಆಹಾರಗಳು, ಸಕ್ಕರೆ ಮತ್ತು ಹಣ್ಣಿನ ರಸಗಳ ಜೊತೆಗೆ ಉಪ್ಪು ಸೇವನೆಯು ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆಯನ್ನು ಹೆಚ್ಚಿಸುತ್ತಿದೆ. ಉಪ್ಪು ಇನ್ಸುಲಿನ್ ಉತ್ಪಾದನೆಗೆ ಅಡ್ಡಿಪಡಿಸುವುದರ ಜೊತೆಗೆ ಮಧುಮೇಹಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ಹೆಚ್ಚಿನ ಉಪ್ಪು ಸೇವನೆಯು ಅಧಿಕ ರಕ್ತದೊತ್ತಡ ಮತ್ತು ಮಧುಮೇಹಕ್ಕೆ ಕಾರಣವಾಗಬಹುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಅಧಿಕ ರಕ್ತದೊತ್ತಡ ಮತ್ತು ಮಧುಮೇಹವು ಅಂತಿಮವಾಗಿ ಹೃದ್ರೋಗಕ್ಕೆ ಕಾರಣವಾಗಬಹುದು. ದಿನಕ್ಕೆ 1,500 ಮಿಗ್ರಾಂ ಸೋಡಿಯಂ ಮೀರದಂತೆ ಎಚ್ಚರಿಕೆ ವಹಿಸಬೇಕು. ಹೆಚ್ಚಿನ ಉಪ್ಪನ್ನು ಪಲ್ಯ, ಪಚ್ಚಡಿ, ಉಪ್ಪಿನಕಾಯಿ, ತಿಂಡಿ, ಮೊಸರುಗಳಿಗೆ ಸೇರಿಸಿದರೆ ಅಪಾಯಕಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ.
ಕರ್ರಿಗಳಿಗೆ ಕಡಿಮೆ ಉಪ್ಪು ಸೇರಿಸಿ ಜೊತೆಗೆ ಆದಷ್ಟು ಹೊರಗಿನ ಪದಾರ್ಥಗಳಿಂದ ದೂರವಿರುವುದು ಉತ್ತಮ. ಉಪ್ಪಿನ ಬದಲು ಸ್ವಲ್ಪ ಕಾಳುಮೆಣಸಿನ ಪುಡಿಯನ್ನು ಬಳಸುವುದರಿಂದ ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಸಲಹೆ ನೀಡಿದ್ದಾರೆ.