Bengaluru

LIVE; ಕರ್ನಾಟಕ ಬಜೆಟ್‌ 2022; ರಾಜ್ಯ ಬಜೆಟ್‌ನ ಮುಖ್ಯಾಂಶಗಳು

ಬೆಂಗಳೂರು; 2022-23 ನೇ ಬಜೆಟ್‌ನ್ನು ಸಿಏಂ ಬಸವರಾಜ ಬೊಮ್ಮಾಯಿ ಮಂಡಿಸುತ್ತಿದ್ದಾರೆ.  ರಾಜ್ಯದ ಅಭಿವೃದ್ಧಿಗೆ ಪಂಚಸೂತ್ರಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಈ ಬಾರಿ ಸಿಎಂ 2,53,165 ಕೋಟಿ ರೂ. ಬಜೆಟ್​ ಮಂಡಿಸುತ್ತಿದ್ದಾರೆ.  ಅದರ ಮುಖ್ಯಾಂಶಗಳು ಇಲ್ಲಿವೆ.

  • ಕೃಷಿಗೆ 3370 ಕೋಟಿ ರೂಪಾಯಿ ಮೀಸಲು
  • ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿಗೆ 68478 ಕೋಟಿ ರೂಪಾಯಿ
  • ಸಂಸ್ಕೃತಿ ಮತ್ತು ಪರಂಪರೆ ರಕ್ಷಣೆಗೆ 3102 ಕೋಟಿ ರೂಪಾಯಿ
  • ಬೆಂಗಳೂರು ಅಭಿವೃದ್ಧಿ 84೦9 ಕೋಟಿ ರೂಪಾಯಿ ಅನುದಾನ
  • ಮೀನು ಕೃಷಿ ಅಭಿವೃದ್ಧಿಗೆ ಈ ಬಾರಿ ವಿಶೇಷ ಒತ್ತು
  • ಆಡಳಿತ ಸುಧಾರಣೆಗೆ 56710 ಕೋಟಿ ರೂಪಾಯಿ ಅನುದಾನ
  • 2 ಸರ್ಕಾರಿ ಸ್ವಾಮ್ಯದ ಉದ್ಯಮಗಳಿಂದ ಬಂಡವಾಳ ಹಿಂತೆಗೆತ
  • ಆಹಾರ ಇಲಾಖೆಗೆ 2288 ಕೋಟಿ ರೂಪಾಯಿ ಅನುದಾನ
  • ಮಕ್ಕಳ ಅಬ್ಯುದಯಕ್ಕೆ 40944 ಕೋಟಿ ರೂಪಾಯಿ
  • ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ 4713 ಕೋಟಿ ರೂಪಾಯಿ
  • ರಾಜ್ಯದ ಕೆರೆಗಳ ಅಭಿವೃದ್ಧಿಗೆ 500 ಕೋಟಿ ರೂಪಾಯಿ
  • ಪ್ರವಾಹದಿಂದ ಹಾನಿಗೊಳಗಾದ ಕೆರೆಗಳ ಅಭಿವೃದ್ಧಿಗೆ 200 ಕೋಟಿ ರೂಪಾಯಿ
  • ವಸತಿ ಇಲಾಖೆಗೆ 3594 ಕೋಟಿ ರೂಪಾಯಿ ಅನುದಾನ
  • ಕೃಷಿ ಮತ್ತು ತೋಟಗಾರಿಕೆ ಅಭಿವೃದ್ಧಿಗೆ 8454 ಕೋಟಿ ರೂಪಾಯಿ ಅನುದಾನ
  • ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ 3 ಸಾವಿರ ಕೋಟಿ ರೂಪಾಯಿ ಅನುದಾನ
  • ವಿನೂತನ ಮಾದರಿಯ ಏಳು ವಿಶ್ವವಿದ್ಯಾಲಯಗಳ ಸ್ಥಾಒನೆ
  • ಲೋಕೋಪಯೋಗಿ ಇಲಾಖೆಗೆ 10447 ಕೋಟಿ ರೂಪಾಯಿ
  • ಬೆಳಗಾವಿಯ ಅಥಣಿಯಲ್ಲಿ ಹೊಸ ಕೃಷಿ ಕಾಲೇಜು ಸ್ಥಾಪನೆ
  • ಬಳ್ಳಾರಿಯ ಹಗರಿಯಲ್ಲಿ ಹೊಸ ಕೃಷಿ ಕಾಲೇಜು ಸ್ಥಾಪನೆ
  • ಹಿರೇಕೆರೂರಿನಲ್ಲಿ ಗೋವಿನ ಜೋಳ ಸಂಶೋಧನಾ ಕೇಂದ್ರ ಸ್ಥಾಪನೆ
  • ರಾಜ್ಯದಲ್ಲಿ 300 ಮಹಿಳಾ ಸ್ವಾಸ್ಥ್ಯ ಕೇಂದ್ರ ಸ್ಥಾಪನೆ
  • ರಾಯಚೂರು ವಿವಿಗೆ 15 ಕೋಟಿ ರೂಪಾಯಿ ಅನುದಾನ
  • 30 ಸರ್ಕಾರಿ ಐಟಿಐ ಕಾಲೇಜುಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತದೆ
  • ಕಲಬುರಗಿ, ಯಾದಗಿರಿಯಲ್ಲಿ ತೊಗರಿ ಭಿಮಾ ಬ್ರಾಂಡ್‌
  • ಹೂ, ಹಣ್ಣು, ತರಕಾರಿ ಬೆಳೆಗಾರರಿಗೆ ಅನುದಾನ ಘೋಷಣೆ
  • ಗ್ರಾಮೀಣ ಜನರಿಗೆ ತಾಲ್ಲೂಕು ಮಟ್ಟದಲ್ಲಿ ಹೃದಯ ಚಿಕಿತ್ಸೆ
  • ಕಟ್ಟಡ ಕಾರ್ಮಿಕರ ಶ್ರೇಯೋಭಿವೃದ್ಧಿಗೆ 2100 ಕೋಟಿ ಮೀಸಲು
  • ಬೀದರ್, ಕಲಬುರಗಿ ಕೋಟೆಗಳ ಪುನರುಜ್ಜೀವನಕ್ಕೆ ಒತ್ತು
  • ಆಹಾರ ಇಲಾಖೆ – 2,288 ಕೋಟಿ ರೂಪಾಯಿ ಅನುದಾನ
  •   ವಸತಿ ಇಲಾಖೆ – 3,594 ಕೋಟಿ ರೂಪಾಯಿ ಅನುದಾನ
  • ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ – 4,713 ಕೋಟಿ ಅನುದಾನ
  • ಕೃಷಿ ಮತ್ತು ತೋಟಗಾರಿಕೆ ಇಲಾಖೆ – 8,457 ಕೋಟಿ ರೂ ಅನುದಾನ
  • ಸಮಾಜ ಕಲ್ಯಾಣ ಇಲಾಖೆ – 9,389 ಕೋಟಿ ರೂ ಅನುದಾನ
  • ಲೋಕೋಪಯೋಗಿ ಇಲಾಖೆ – 10,447 ಕೋಟಿ ರೂ ಅನುದಾನ
  • ಒಳಾಡಳಿತ ಮತ್ತು ಸಾರಿಗೆ ಇಲಾಖೆ – 11,222 ಕೋಟಿ ರೂ ಅನುದಾನ
  • ಜಲ ಸಂಪನ್ಮೂಲ ಇಲಾಖೆ – 20,601 ಕೋಟಿ ರೂ ಅನುದಾನ
  • ಶಿಕ್ಷಣ ಇಲಾಖೆ – 31,980 ಕೋಟಿ ರೂಪಾಯಿ ಅನುದಾನ
  • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ – 17,325 ಕೋಟಿ ರೂಪಾಯಿ
  • ನಗರಾಭಿವೃದ್ಧಿ ಇಲಾಖೆ – 16,076 ಕೋಟಿ ರೂಪಾಯಿ ಅನುದಾನ
  • ಕಂದಾಯ ಇಲಾಖೆ – 16,388 ಕೋಟಿ ರೂಪಾಯಿ ಅನುದಾನ
  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ – 13,982 ಕೋಟಿ ರೂಪಾಯಿ ಅನುದಾನ
  • ಇಂಧನ ಇಲಾಖೆ – 12,655 ಕೋಟಿ ರೂಪಾಯಿ ಅನುದಾನ ಘೋಷಣೆ
  • ಶಿಕ್ಷಣ, ಆರೋಗ್ಯ,ಕೌಶಲ್ಯಾಭಿವೃದ್ಧಿ ಮತ್ತು ವಿವಿಧ ಕಲ್ಯಾಣ ಇಲಾಖೆಗಳಿಗೆ 6,329 ಕೋಟಿ ಹೆಚ್ಚುವರಿ ಅನುದಾನ
  • ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ವಲಯಕ್ಕೆ 55,657 ಕೋಟಿ ಅನುದಾನ
  •  ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ವಲಯಕ್ಕೆ 3,012 ಕೋಟಿ
  • ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವಾ ವಲಯಕ್ಕೆ 56,710 ಕೋಟಿ
  • ಆಶಾ ಕಾರ್ಯಕರ್ತೆಯ ಗೌರವ ಧನ ಒಂದು ಸಾವಿರ ರೂಪಾಯಿ ಹೆಚ್ಚಳ
  • ಬೆಳಗಾವಿಗೆ ಪ್ರಾದೇಶಿಕ ಕಿದ್ವಾಯಿ ಆಸ್ಪತ್ರೆ 50 ಕೋಟಿ ರೂಪಾಯಿ ಅನುದಾನ
  • ತುರ್ತು ವೈದ್ಯಕೀಯ ಸೇವೆಗೆ ಏರ್‌ ಆಂಬುಲೆನ್ಸ್‌
  • ದ್ವಿತಳಿ ರೇಷ್ಮೆ ಗೂಡಿಗೆ ಹತ್ತು ಸಾವಿರ ರೂ. ಪ್ರೋತ್ಸಾಹ ಧನ
  • ತುಮಕೂರಿನಲ್ಲಿ 20 ಕೋಟಿ ರೂಪಾಯಿ ವೆಚ್ಚದಲ್ಲಿ ಟ್ರಾಮಾ ಸೆಂಟರ್‌
  • ಮೈಸೂರಿನ ಕೆಆರ್‌ ಆಸ್ಪತ್ರೆಗೆ 89 ಕೋಟಿ ರೂಪಾಯಿ ಅನುದಾನ
  • ತಾಲ್ಲೂಕು ಕೇಂದ್ರಗಳಲ್ಲಿ ನೀಟ್‌ ಪರೀಕ್ಷೆಗೆ ತರಬೇತಿ ವ್ಯವಸ್ಥೆ
  • 100 ನೂತನ ಪಶು ಚಿಕಿತ್ಸಾಲಯಗಳ ಆರಂಭ
  • ರೇಷ್ಮೆ ಬೆಳೆಗಾರರ ಹಿತರಕ್ಷಣೆಗೆ ಆದ್ಯತೆ
  • ಬಾಲ್ಯವಿವಾಹ ತಡೆಗೆ ಸ್ಪೂರ್ತಿ ಯೋಜನೆ ವಿಸ್ತರಣೆ
  • ಮಹಿಳಾ ಸ್ಟಾರ್ಟ್‌ಅಪ್‌ಗೆ ಹತ್ತು ಲಕ್ಷ ರೂಪಾಯಿ ನೇರ ಸಾಲ
  • ಉದ್ಯೋಗಸ್ಥ ಮಹಿಳೆಯರಿಗೆ ಹೊಸ ವಸತಿ ನಿಲಯ ಸ್ಥಾಪನೆ
  • ಹಾಲು ಉತ್ಪಾದಕರಿಗೆ ಕ್ಷೀರ ಸಮೃದ್ಧಿ ಬ್ಯಾಂಕ್‌ ಸ್ಥಾಪನೆ
  • ಞಂಗನವಾಡಿ ಕಾರ್ಯಕರ್ತೆಯ ಗೌರವ ಧನ ಹೆಚ್ಚಳ
  • ಕೃಷಿ ಜಮೀನು ಡ್ರೋನ್ ಸರ್ವೆಗೆ ₹287 ಕೋಟಿ ಅನುದಾನ ಘೋಷಣೆ
  • ನೋಂದಣಿ ಕಚೇರಿಗಳ ಉನ್ನತೀಕರಣಕ್ಕೆ ₹406 ಕೋಟಿ
  • 10 ಮಹಾನಗರ ಪಾಲಿಕೆ ವ್ಯಾಪ್ತಿಯ ದಾಖಲೆ ಸ್ಕ್ಯಾನಿಂಗ್​ಗಾಗಿ 15 ಕೋಟಿ ರೂಪಾಯಿ ಮೀಸಲು
  • ಮುಜರಾಯಿ ಇಲಾಖೆ ವ್ಯಾಪ್ತಿಯ ದೇಗಲಗಳ ಸ್ವಾಯತ್ತತೆ ಹಾಗೂ ದೇಗುಲಗಳ ಅಭಿವೃದ್ಧಿಗೆ 168 ಕೋಟಿ ರೂಪಾಯಿ ಘೋಷಣೆ
  • 2 ವರ್ಷದಲ್ಲಿ 25 ಲಕ್ಷ ಮನೆಗಳಿಗೆ ನೀರು ಸಂಪರ್ಕ ಒದಗಿಸಲಾಗುವುದು
  •  ಕುಡಿಯುವ ನೀರು ಸಂಪರ್ಕಕ್ಕೆ 7 ಸಾವಿರ ಕೋಟಿ ರೂ. ಮೀಸಲು
  • ಗ್ರಾಮೀಣ ಭಾಗದ ರಸ್ತೆಗಳ ಸುಧಾರಣೆಗೆ ₹1,600 ಕೋಟಿ
  • ಮಳೆಗಾಲದಲ್ಲಿ ಹಾನಿಯಾದ ರಸ್ತೆ ಅಭಿವೃದ್ಧಿಗೆ ₹300 ಕೋಟಿ
  • ಅಮೃತ್ ಗ್ರಾಮ ಪಂಚಾಯಿತಿ ಯೋಜನೆಗೆ ₹188 ಕೋಟಿ
  • 750 ಗ್ರಾ.ಪಂ.ಗಳಿಗೆ ತಲಾ 25 ಲಕ್ಷ ರೂಪಾಯಿ
  • ಪ್ರಸಕ್ತ ವರ್ಷದಲ್ಲಿ ರಾಜ್ಯದ 1000 ಕೆರೆಗಳ ಅಭಿವೃದ್ಧಿ
  • ತಲಾ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ
  • ಗ್ರಾಮ ಒನ್ ಯೋಜನೆ ರಾಜ್ಯಾದ್ಯಂತ ವಿಸ್ತರಣೆ ಮಾಡಲು ಯೋಜನೆ
  • ಆಶಾ ಕಾರ್ಯಕರ್ತೆಯರು ಸೇರಿ ಹಲವರ ಗೌರವ ಧನ ಹೆಚ್ಚಳ
  • ಆಶಾ ಕಾರ್ಯಕರ್ತರು, ಗ್ರಾಮ ಸಹಾಯಕರಿಗೆ 1000 ರೂಗಳು, ಬಿಸಿಯೂಟ ತಯಾರಿಕರಿಗೂ ತಲಾ 1000 ಗೌರವ ಧನ ಹೆಚ್ಚಳ
  • ಅಂಗನವಾಡಿ ಕಾರ್ಯಕರ್ತರಿಗೂ ಗೌರವ ಧನ ಹೆಚ್ಚಳಕ್ಕೆ ಸ್ಕೀಮ್. ಸೇವಾನುಭವ ಆಧಾರದಲ್ಲಿ ಸಾವಿರದಿಂದ 1500 ರೂಗಳ ಹೆಚ್ಚಳ
  • ಪ್ರವಾಸಿ ಗೈಡ್‌ಗಳಿಗೆ ಮಾಸಿಕ 2000 ಪ್ರೋತ್ಸಾಹ ಗೌರವ ಧನ
  • ಸಂಕಷ್ಟದಲ್ಲಿರುವ ಕುರಿಗಾಹಿಗಳಿಗೆ 5 ರೂಪಾಯಿ ವೆಚ್ಚದಲ್ಲಿ ವಸತಿ ವ್ಯವಸ್ಥೆ
  • ಪೌರಕಾರ್ಮಿಕರಿಗೆ 2 ಸಾವಿರ ರೂ. ಮಾಸಿಕ ಸಂಕಷ್ಟ ಭತ್ಯೆ
  • ಬೆಳಕು ಕಾರ್ಯಕ್ರಮದಡಿ 98 ಸಾವಿರ ಮನೆಗೆ ವಿದ್ಯುತ್‌
  • ವಿದ್ಯುತ್ ಸರಬರಾಜು ನಿಗಮಗಳ ಪುನರ್ ರಚನೆ
  • ಆಸ್ತಿ ಹಣ ಗಳಿಕೆ, ಆರ್ಥಿಕ ಸ್ವಾವಲಂಬನೆ ಹಾಗೂ ಸಂಪನ್ಮೂಲ ಕ್ರೋಡೀಕರಣಕ್ಕೆ ತಜ್ಞರ ಸಮಿತಿ ರಚನೆ
  • ನಿರಂತರವಾಗಿ ವಿದ್ಯುತ್ ಸರಬರಾಜಿಗೆ ಉಪಕೇಂದ್ರ
  • ಕೆಪಿಟಿಸಿಎಲ್ ವತಿಯಿಂದ 64 ಹೊಸ ಉಪಕೇಂದ್ರ
  • 10 ಸಾವಿರ ಸೌರಶಕ್ತಿ ನೀರಾವರಿ ಪಂಪ್‌ಸೆಟ್ ಹಾಗೂ  227 ಕೋಟಿ ರೂಪಾಯಿ ವೆಚ್ಚದಲ್ಲಿ ಸೌರಶಕ್ತಿ ಪಂಪ್‌ಸೆಟ್ ವ್ಯವಸ್ಥೆ
  • ರಾಜ್ಯದ ಪ್ರಮುಖ ನೀರಾವರಿ ಯೋಜನಗಳಿಗೆ ಮಾಡಲಾದ ಅನುದಾನ ಹಂಚಿಕೆ
  • ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3: 5000 ಕೋಟಿ ರೂ.
  • ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆ: 1000 ಕೋಟಿ ರೂ.
  • ಭದ್ರಾ ಮೇಲ್ದಂಡೆ ಯೋಜನೆ: 3000 ಕೋಟಿ ರೂ.
  • ಎತ್ತಿನಹೊಳೆ ಯೋಜನೆ: 3,000 ಕೋಟಿ ರೂ. ಅನುದಾನ
  • ಮೇಕೆದಾಟು ಯೋಜನೆ: 1,000 ಕೋಟಿ ರೂ. ಅನುದಾನ
  • ತುಂಗಭದ್ರಾ ಜಲಾಶಯದ ನೀರು ಸಂಗ್ರಹನೆ ಕೊರತೆ ಸರಿದೂಗಿಸಲು ನವಲೆ ಬಳಿ ಸಮತೋಲನಾ ಜಲಾಶಯ ನಿರ್ಮಾಣಕ್ಕೆ 1,000 ಕೋಟಿ ರೂ. ಅನುದಾನ
  • 2021-22ನೇ ಸಾಲಿನಲ್ಲಿ ಅನುಮೋದಿಸಿದ 8,774 ಕೋಟಿ ರೂ.ಗಳ ಹೊಸ ನೀರಾವರಿ ಯೋಜನೆಗಳಿಗೆ ರೂಪುರೇಷೆ ಸಿದ್ಧಪಡಿಸಲು ಕ್ರಮ
  • ರಾಜ್ಯದ ಕೆರೆಗಳ ಸಮಗ್ರ ಅಭಿವೃದ್ಧಿಗೆ 500 ಕೋಟಿ ರೂ. ಕ್ರಿಯಾ ಯೋಜನೆ.
  • ಅದರಲ್ಲಿ ಪ್ರವಾಹದಿಂದ ಹಾನಿಯಾದ ಕೆರೆಗಳ ದುರಸ್ತಿಗೆ 200 ಕೋಟಿ ರೂ. ಅನುದಾನ
  • ಸರ್ವರಿಗೂ ಸೂರು ಯೋಜನೆ ಅಡಿ 5 ಲಕ್ಷ ಹೊಸ ಮನೆಗಳು
  •   6,612 ಕೋಟಿ ರೂಪಾಯಿ ವೆಚ್ಚದಲ್ಲಿ 5 ಲಕ್ಷ ಹೊಸ ಮನೆಗಳು
  • ಮನೆಗಳ ಹಂಚಿಕೆಯಲ್ಲಿ ಪರಿಶಿಷ್ಟ ಜಾತಿ, ಪ.ಪಂಗಡಕ್ಕೆ ಆದ್ಯತೆ, ಪ.ಜಾತಿ, ಪ.ಪಂಗಡದ ಅಲೆಮಾರಿ, ಅರೆ ಅಲೆಮಾರಿ ಜನಾಂಗ ಹಾಗೂ  ಮೀನುಗಾರರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೂ ಆದ್ಯತೆ
  • ಕಟ್ಟಡ ಕಾರ್ಮಿಕರಿಗೆ ನೂರು ಸಂಚಾರಿ ಹೈಟೆಕ್‌ ಕ್ಲಿನಿಕ್‌ಗಳ ಸ್ಥಾಪನೆ
  • ರಾಷ್ಟ್ರೀಯ ಶಿಕ್ಷಣ ನೀತಿ-2020ರ ಮಾರ್ಗಸೂಚಿಯಂತೆ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣ, ಶಿಕ್ಷಕರ ಶಿಕ್ಷಣ ಹಾಗೂ ವಯಸ್ಕರ ಶಿಕ್ಷಣ ಕ್ಷೇತ್ರಗಳಿಗೆ ನೂತನ ಪಠ್ಯಕ್ರಮ ರಚನೆ
  • ಹೋಬಳಿ ಮಟ್ಟದಲ್ಲಿ ಮಾದರಿ ಶಾಲೆಗಳಾಗಿ ಮೂಲಭೂತ ಸೌಕರ್ಯವಿರುವ ಶಾಲೆಗಳ ಉನ್ನಥೀಕರಣ
  • ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ 500 ಕೋಟಿ ರೂ. ಅನುದಾನ. ಆಯ್ದ ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಿಗೆ ಆದ್ಯತೆ
  • ಸರ್ಕಾರಿ ಪ್ರೌಢ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಪೀಠೋಪಕರಣ ಒದಗಿಸಲು 100 ಕೋಟಿ ರೂ.
  • ನೋಡಿ ಕಲಿ ಮಾಡಿ ತಿಳಿ ಪರಿಕಲ್ಪನೆಯಡಿ ರಾಜ್ಯದ 169 ಸರ್ಕಾರಿ ಬಾಲಕಿಯರ ಪ್ರೌಢಶಾಲೆಗಳಿಗೆ ಲ್ಯಾಬ್-ಇನ್-ಎ-ಕಿಟ್ ವಿತರಣೆ
  • ಗದಗ-ಯಲವಿಗಿ ನೂತನ ರೈಲು ಮಾರ್ಗ ನಿರ್ಮಿಸಲಾಗುವುದು, 640 ಕೋಟಿ ರೂ. ವೆಚ್ಚದಲ್ಲಿ ನೂತನ ರೈಲು ಮಾರ್ಗ
    ಧಾರವಾಡ-ಕಿತ್ತೂರು-ಬೆಳಗಾವಿ ನೂತನ ರೈಲು ಮಾರ್ಗ- 927 ಕೋಟಿ ರೂಪಾಯಿ ವೆಚ್ಚದಲ್ಲಿ ರೈಲು ಮಾರ್ಗ
  • ರಾಜ್ಯದಲ್ಲಿ 20, ನೂತನ ರೈಲ್ವೆ ಮೇಲ್ಸೇತುವೆ ನಿರ್ಮಾಣ
  • 186 ಕೋಟಿ ವೆಚ್ಚದಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ
  • ರಾಯಚೂರಿನಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ
  • ದಾವಣಗೆರೆ, ಕೊಪ್ಪಳದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ವರದಿ
  • ಮೈಸೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ
  • 30 ಕೋಟಿ ವೆಚ್ಚದಲ್ಲಿ ಹೆಲಿಪೋರ್ಟ್‌ಗಳ ಅಭಿವೃದ್ಧಿ,ಮಡಿಕೇರಿ, ಚಿಕ್ಕಮಗಳೂರು, ಹಂಪಿಯಲ್ಲಿ ಅಭಿವೃದ್ಧಿ
  • ಎನ್‌ಜಿಇಎಫ್ ನ 105 ಎಕರೆ ಪ್ರದೇಶದಲ್ಲಿ ಸಿಂಗಾಪುರ ಮಾದರಿಯಲ್ಲಿ ಗ್ರೀನ್ ಎಕ್ಸ್ ಪೋ ನಿರ್ಮಾಣ
  • ಯಲಹಂಕ ಬ ಳಿಕ ಜಾರಕಬಂಡೆ ಕಾವಲ್ ನಲ್ಲಿ 350 ಎಕರೆ ವಿಸ್ತೀರ್ಣದ ಅಟಲ್ ಬಿಹಾರಿ ವಾಜಪೇಯಿ ಉದ್ಯಾನವನ ಅಭಿವೃದ್ಧಿ
  • ಬೆಂಗಳೂರಿನ ನಾಲ್ಕು ಭಾಗಗಳಲ್ಲಿ 500 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ
  • ಅಸಾಂಕ್ರಾಮಿಕ ರೋಗಗಳ ತಪಾಸಣೆಗೆ ಬೆಂಗಳೂರಿನ ಎಲ್ಲಾ ವಾರ್ಡ್ ಗಳಲ್ಲಿ ನಮ್ಮ ಕ್ಲಿನಿಕ್ ಸ್ಥಾಪನೆ
  • ಬೆಂಗಳೂರಿನ ಆಯ್ದ 20 ಶಾಲೆಗಳನ್ನು 89 ಕೋಟಿ ರೂ.ಗಳಲ್ಲಿ ಉನ್ನತೀಕರಣ, ಬೆಂಗಳೂರು ಪಬ್ಲಿಕ್ ಶಾಲೆಗಳ ಅಭಿವೃದ್ಧಿ
  • ಯಾವುದೇ ತೆರಿಗೆ ಹೆಚ್ಚಳ ಇಲ್ಲ,  ರಾಜಸ್ವ ಕೊರತೆ ಅಂದಾಜು 14,699 ಕೋಟಿ, ವಿತ್ತೀಯ ಕೊರತೆ ಅಂದಾಜು 61,564 ಕೋಟಿ ಇದೆ
  • ಸಾರಿಗೆ ಇಲಾಖೆಗೆ 8,007 ಕೋಟಿ ರಾಜಸ್ವ ಸಂಗ್ರಹಣೆ ಗುರಿ
  • ಅಬಕಾರಿ ಇಲಾಖೆಗೆ 29,000 ಕೋಟಿ ರಾಜಸ್ವ ಸಂಗ್ರಹ ಗುರಿ
  • ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 15,000 ಕೋಟಿ ರೂ ರಾಜಸ್ವ ಗುರಿ
  • ವಾಣಿಜ್ಯ ತೆರಿಗೆ ಇಲಾಖೆಗೆ 77,010 ಕೋಟಿ ತೆರಿಗೆ ಸಂಗ್ರಹ ಗುರಿ
  • 287 ಕೋಟಿ ವೆಚ್ಚದಲ್ಲಿ ರಾಜ್ಯಾದ್ಯಂತ ಕೃಷಿ ಜಮೀನು ಮತ್ತು ಇತರೆ ಸ್ವತ್ತು ಡ್ರೋಣ್ ಸರ್ವೇ
  • 406 ಕೋಟಿ ವೆಚ್ಚದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ಉನ್ನತೀಕರಣ
  • ಎಲ್ಲಾ ಪಾರಂಪರಿಕ ನೊಂದಾಯಿತ ಶಾಶ್ವತ ದಾಖಲೆಗಳ ಸ್ಕ್ಯಾನಿಂಗ್
  • ಮೊದಲ ಹಂತದಲ್ಲಿ ಬಿಬಿಎಂಪಿ ಮತ್ತು ೧೦ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸ್ಕ್ಯಾನಿಂಗ್ ಗೆ 15 ಕೋಟಿ ಮೀಸಲು
Share Post